ನಿತ್ಯವಾಣಿ,ಭಿಮಸಮುದ್ರ,(ಜೂ,7) : ಸೋಮವಾರ ಚಿತ್ರದುರ್ಗದ ಭಿಮಸಮುದ್ರಗ್ರಾಮದಲ್ಲಿಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಮತ್ತು ಭೀಮಸಮುದ್ರಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮುಂಚೂಣಿ ವರ್ಗದ ಕಾರ್ಯಕರ್ತರುಗಳಿಗೆ ಕೋವಿಡ್ ಲಸಿಕೆ ಅಭಿಯಾನವನ್ನು ಭಿಮಸಮುದ್ರದ ತರಳಬಾಳು ಕಲ್ಯಾಣ ಮಂಟಪದಲ್ಲಿಹಮ್ಮಿಕೊಳ್ಳಲಾಗಿತ್ತು.ಕೇಂದ್ರ ಮಾಜಿ ಸಚಿವರು ಹಾಗೂ ದಾವಣಗೆರೆ ಸಂಸದರಾ ಜಿ.ಎಂ.ಸಿದ್ದೇಶ್ವರ್ ರವರು ಚಾಲನೆ ನೀಡುವ ಮೂಲಕ ದಿನದಿಂದ ದಿನಕ್ಕೆ ಕರೋನಾ ಗ್ರಾಮಗಳಲ್ಲಿ ಹೆಚ್ಚಾಗುತ್ತಿದ್ದು, ಕರೋನ ನಿಯಂತ್ರಣಕ್ಕೆ ನಮ್ಮಗ್ರಾಮ ಪಂಚಾಯ್ತಿ ಸಕಲ ಸಿದ್ದತೆ ಮಾಡಿದ್ದಾರೆ.ಜನರಲ್ಲಿಕರೋನಾ ಬಗ್ಗೆ ಭಯಬೇಡ ಎಲ್ಲರೂ ಲಸಿಕೆ ಹಾಕಿಸಿ ಸರ್ಕಾರದ ನಿಯಮ ಪಾಲಿಸಿ ಕರೋನಾದಿಂದ ನಮ್ಮಗ್ರಾಮವನ್ನು ಮುಕ್ತಗೊಳಿಸಿ ಎಂದು ಗ್ರಾಮಸ್ಥರಿಗೆ ತಿಳಿಸುವುದರ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಂಸದರ ಪುತ್ರ ಅನಿತ್‍ರವರು ಶ್ರೀಮತಿ ಹಾಲಮ್ಮ ಮಲ್ಲಿಕಾರ್ಜುನಪ್ಪ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀತರಳಬಾಳು ಕಲ್ಯಾಣ ಮಂಟಪದಲ್ಲಿ ಕರೋನಾ ರೋಗಿಗಳಿಗೆ 40 ಹಾಸಿಗೆಯುಳ್ಳ ಕೋವಿಡ್‍ಕೇರ್ ಸೆಂಟರ್ ರೋಗಿಗಳ ಸೇವೆಗೆ ಸಕಲ ಸಿದ್ದವಾಗಿದೆ ಎಂದು ಹೇಳಿದರು. ಈ ದಿನದ ಸಂಜೆಯೊಳಗೆ 700 ಜನರಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿ.ಜೆ.ಪಿ.ಅಧ್ಯಕ್ಷರಾ ಎ.ಮುರುಳಿ, ಜಿಲ್ಲಾ ಮಾಧ್ಯಮ ವಕ್ತಾರಾದ ನಾಗರಾಜ್ ಬೇದ್ರೆ, ಆರೋಗ್ಯಾಧಿಕಾರಿಗಳಾದ ಮೊಹಮ್ಮದ್ ಸೌದಿಕುಲ್ಲಾ ಷರೀಫ್ ಭೀಮಸಮುದ್ರ ಗ್ರಾ.ಪಂ. ಅಧ್ಯಕ್ಷರಾದ ಪಾರ್ವತಮ್ಮ, ಉಪಾಧ್ಯಕ್ಷರಾದ ಶರತ್ ಪಾಟೀಲ್, ಸದಸ್ಯರಾದಅಶೋಕ್, ರಮೇಶ್‍ಗ್ರಾಮಸ್ಥರು ಉಪಸ್ಥಿತರಿದ್ದರು. ಸುದ್ದಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020