ಜಗದ್ಗುರು ಬಸವನಾಗಿದೇವ, ಮಂಗಳಮುಖಿಯರು,ಹಿರಿಯ ವೃದ್ದೆ, ನವದಂಪತಿಗಳು ಏಕತಾ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಕೋವಿಡ್ ಲಸಿಕೆ ಪಡೆದು ಶುಭಕೋರಿದರು

ನಿತ್ಯವಾಣಿ,ಚಿತ್ರದುರ್ಗ,( ಸೆ.10)  : ನಗರದ ಜೋಗಿಮಟ್ಟಿ ರಸ್ತೆಯ 4ನೇ ಕ್ರಾಸ್ ಬಳಿ ಪ್ರಥಮ ಬಾರಿಗೆ ಅದ್ದೂರಿಯಾಗಿ ಪ್ರತಿಷ್ಠಾಪಿಸಲಾಗಿರುವ ಏಕತಾ ಹಿಂದೂ ಮಹಾಗಣಪತಿ ಸೇವಾ ಸಮಿತಿಯಿಂದ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೊರೊನಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ವಿಶೇಷವಾಗಿ ಈ ಸಮಯದಲ್ಲಿ    ಜಗದ್ಗುರು ಛಲವಾದಿ  ಮಹಾಸಂಸ್ಥಾನ ಮಠದ ಪರಮಪೂಜ್ಯ ಬಸವನಾಗಿದೇವ ಸ್ವಾಮಿಯವರು ಹಾಗೂ ಮಂಗಳಮುಖಿಯರು. ಹಿರಿಯ ವೃದ್ದೆ ,    ನವ ದಂಪತಿಗಳಾದ ವೈ.ಪಿ.ಚಂದ್ರಶೇಖರ್ ಎಂ.ನಂದಿನಿಯವರು ಲಸಿಕೆ ಪಡೆಯುವ ಮೂಲಕ ಏಕತಾ ಹಿಂದೂಮಹಾಗಣಪತಿಯ ಪೂಜಾ ಕಾರ್ಯಕ್ರಮಕ್ಕೆ ಶುಭ ಕೋರಿದರು. 
ಈ ಸಂದರ್ಭದಲ್ಲಿ ಏಕತಾ ಹಿಂದೂ  ಮಹಾಗಣಪತಿಯ ರುವಾರಿಗಳಾದ ಸೈಟ್ ಬಾಬಣ್ಣ,  ಸಮಿತಿ ಅಧ್ಯಕ್ಷ ಕುಮಾರ್, ಸಮಿತಿಯ ಉಪಾಧ್ಯಕ್ಷರಾದ ಎಸ್.ಟಿ.ನವೀನ್‍ಕುಮಾರ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ  ಸಂತೋಷ್  ಸಮಿತಿಯ ಉಸ್ತುವಾರಿ ಮಾಲತೇಶ್‍ಅರಸ್ ಹರ್ತಿಕೋಟೆ, ಕನೂನು ಸಲಹೆಗಾರರಾದ ಲೀಲಾಧರ ಠಾಕೂರ್,  ಛಲವಾದಿ ಮಠದ ಯೋಗೇಶ್, ಪೃಥ್ವಿ, ಹಾಗೂ ಆರೋಗ್ಯ ಇಲಾಖೆಯ ಮೇಲ್ವಿಚಾರಕರು ಪರ್ವಿನ ಬಾನು. ಬಾನು ಇನ್ನಿತರ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published.