“ಮನುಷ ಕುಲ‌ ರಕ್ಷಿಸಿದ ಮಹಾನ್ ರಾಷ್ಟ್ರ ಭಾರತವಾಗಲಿದೆ” ::ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು

ಚಿತ್ರದುರ್ಗ,  ನಿತ್ಯವಾಣಿ ಮಾ.16: ಇಂದು ಬೆಂಗಳೂರಿನ ವಿಕ್ಟೋರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದು, ವಿಶ್ವದಲ್ಲೆಡೆ ತಲ್ಲಣ ಸೃಷ್ಟಿಸಿದ ಮಹಾಮಾರಿ ಕೊರೊನಾ ಪಿಡುಗನ್ನು ಹೋಗಲಾಡಿಸಲು ಲಸಿಕೆ ಪಡೆಯುವುದೇ ಏಕೈಕ ಮಾರ್ಗವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂದೇಶ ನೀಡಿದ್ದಾರೆ.

ಲಸಿಕೆ ಪಡೆಯಲು ಯಾರೂ ಭಯಪಡಬೇಕಾಗಿಲ್ಲ. ಸೂಜಿ ಚುಚ್ಚು ವುದು ಗೊತ್ತೇ ಆಗುವುದಿಲ್ಲ. ಇರುವೆ ಕಚ್ಚಿದಷ್ಟೂ ನೋವು ಆಗುವುದಿಲ್ಲ ಎಂದು ತಮ್ಮ ಸ್ವಾನುಭವದಿಂದ ಹೇಳಿದ ಶ್ರೀ ಜಗದ್ಗುರುಗಳು, ಭಕ್ತಾದಿಗಳು ಮತ್ತು ಸಾರ್ವಜನಿಕರು ಯಾವುದೇ ಭಯವಿಲ್ಲದೆ ವ್ಯಾಕ್ಸಿನ್ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು.”ಮನೆ ಗೆದ್ದು ಮಾರು ಗೆಲ್ಲು” ಎನ್ನುವಂತೆ ನಮ್ಮ ದೇಶದ ಎಲ್ಲ ಪ್ರಜೆಗಳಿಗೆ ಲಸಿಕೆಯನ್ನು ಕೊಡುವುದಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆಯನ್ನು ಪೂರೈಕೆ ಮಾಡುತ್ತಿರುವ ಭಾರತದ ಪ್ರಧಾನಿ ಮೋದಿಯವರ ಮಾನವೀಯ ದೃಷ್ಟಿಯನ್ನು ಶ್ಲಾಘಿಸಿರುತ್ತಾರೆ.

ಇದು ಸಹಸ್ರಾರು ವರ್ಷಗಳ ಹಿಂದೆ “ವಸುಧೈವ ಕುಟುಂಬಕಮ್” ಎಂದು ಬೋಧಿಸಿದ ಉಪನಿಷತ್ತಿನ ಸೂಕ್ತಿಗೆ ಮತ್ತು “ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಕೂಡಲಸಂಗನ ಶರಣರೇ ಕುಲಜರು” ಎನ್ನುವ ಬಸವಣ್ಣನವರ ಆಶಯಕ್ಕೆ ಪೂರಕವಾಗಿದೆ. ಮನುಜ ಕುಲವನ್ನು ಸಂರಕ್ಷಿಸಿದ ಮಹಾನ್ ರಾಷ್ಟ್ರ ಭಾರತವಾಗಲಿದೆ ಎಂದು ಬಣ್ಣಿಸಿದ್ದಾರೆ

Leave a Reply

Your email address will not be published.