ಆರ್ಯವೈಶ್ಯ ಮಂಡಳಿಯಿಂದ ಲಸಿಕೆ ಕಾರ್ಯಕ್ರಮಕ್ಕೆ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಚಾಲನೆ

ನಿತ್ಯವಾಣಿ,ಹಿರಿಯೂರು, (ಜೂ. 16) : ನಗರದಲ್ಲಿ ಪ್ರತಿಯೊಬ್ಬರು ಕೋವಿಡ್ ಲಸಿಕೆಯನ್ನು ಹಾಕಿಸಿ ಕೊಳ್ಳುವ ಮೂಲಕ ಕೋವಿಡ್ ಮುಕ್ತ ನಗರವನ್ನು ಮಾಡಲು ಸಹಕರಿಸಬೇಕು ಎಂಬುದಾಗಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಸಾರ್ವಜನಿಕರಲ್ಲಿ ಕರೆ ನೀಡಿದರು.

ನಗರದ ವಾಸವಿಕಲ್ಯಾಣ ಮಂಟಪದಲ್ಲಿ ನಗರದ ಆರ್ಯವೈಶ್ಯ ಮಂಡಳಿ ಸಹಕಾರದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಲಸಿಕೆ ಹಾಕಿಸುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ ಎಂಬಕಾರಣ ಜನರು ಮೈಮರೆಯಾಬಾರದು, ಸರ್ಕಾರದ ಕೋವಿಡ್ ನಿಯಮ ಗಳನ್ನು ತಪ್ಪದೇ ಪಾಲಿಸಬೇಕು ಅಲ್ಲದೆ ತಾಲ್ಲೂಕಿನ ಎಲ್ಲಾ ಜನತೆಗೆ ಹಂತ ಹಂತವಾಗಿ ಉಚಿತವಾಗಿ ಕೊರೊನಾ ಲಸಿಕೆ ಹಾಕಲಾಗುವುದು ಎಂಬುದಾಗಿ ಅವರು ಹೇಳಿದರು.

ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಡಿ.ಟಿ.ಶ್ರೀನಿವಾಸ್ ರವರು ಮಾತನಾಡಿ, ನಗರದಲ್ಲಿ ಅತಿ ಹೆಚ್ಚು ಜನಸಂದಣಿಯಿದ್ದು, ನಗರದ ವರ್ತಕರು ಪ್ರತಿನಿತ್ಯ ವ್ಯಾಪಾರ ವ್ಯವಹಾರಗಳಿಗಾಗಿ ಸಾರ್ವಜನಿಕರೊಂದಿಗೆ ಬೆರೆಯುವ ಕಾರಣಕ್ಕೆ ನೀವು ಮೊದಲು ಲಸಿಕೆ ಹಾಕಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳುವ ಮೂಲಕ ಕೋವಿಡ್ ನಿಯಂತ್ರಿಸಲು ಸಹಕರಿಸುವಂತೆ ಮನವಿ ಮಾಡಿದರು.

ಜಿಲ್ಲಾ ಆರ್ಯವೈಶ್ಯಮಂಡಳಿ ಅಧ್ಯಕ್ಷ ಕೆ.ವಿ.ಅಮರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಯವೈಶ್ಯಮಂಡಳಿ ನೇತೃತ್ವದಲ್ಲಿ ನಗರದ 18 ವರ್ಷದಿಂದ 44 ವರ್ಷದ ವರೆಗಿನ ಎಲ್ಲಾ ವರ್ಗದ ಜನರಿಗೆ ಲಸಿಕೆ ನೀಡಲು ಅನುಮತಿನೀಡಿದ ಕ್ಷೇತ್ರದ ಶಾಸಕಿ ಪೂರ್ಣಿಮಾಶ್ರೀನಿವಾಸ್ ಹಾಗು ಕೋವಿಡ್ ವಿಭಾಗದ ಮುಖ್ಯಸ್ಥರಾದ ಡಾ.ರಂಗನಾಥ್, ಡಾ.ವೆಂಕಟೇಶ್ ರವರಿಗೆ ಆರ್ಯವೈಶ್ಯ ಮಂಡಳಿ ಪರವಾಗಿ ಅಭಿನಂದನೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ರೋಷನ್ ಜಮೀರ್, ಜಿಲ್ಲಾ ಆರ್ಯವೈಶ್ಯಮಂಡಳಿ ಅಧ್ಯಕ್ಷ ಕೆ.ವಿ.ಅಮರೇಶ್, ನಗರಸಭೆ ಆಯುಕ್ತೆ ಟಿ.ಲೀಲಾವತಿ, ನಗರಸಭೆ ಸದಸ್ಯರುಗಳಾದ ಎಂ.ಡಿ.ಸಣ್ಣಪ್ಪ, ಮಹೇಶ್ ಪಲ್ಲವ್, ಬಿ.ಎನ್.ತಿಪ್ಪೇಸ್ವಾಮಿ, ಬಾಲಕೃಷ್ಣ, ಚಿರಂಜೀವಿ, ಆರ್ಯವೈಶ್ಯಮಂಡಳಿ ಅಧ್ಯಕ್ಷ ಆರ್.ಪ್ರಕಾಶ್ ಕುಮಾರ್, ಕಾರ್ಯದರ್ಶಿ ಪಿ.ವಿ.ನಾಗರಾಜ್, ಸಮಾಜದ ಮುಖಂಡರಾದ ಆನಂದಶೆಟ್ಟಿ, ಯುವಕಸಂಘದ ಅಧ್ಯಕ್ಷ ಜಗದೀಶ್, ರಾಜೇಶ್, ಅರುಣ್ ಕುಮಾರ್, ಮುಸ್ಲಿಂ ಮುಖಂಡ ಜಬೀವುಲ್ಲಾ, ವರ್ತಕರ ಸಂಘದ ಅಧ್ಯಕ್ಷ ಜಯಣ್ಣ, ಜಿಲ್ಲಾ ನೋಡಲ್ ಅಧಿಕಾರಿ ಡಾ.ರಂಗನಾಥ್, ತಾಲ್ಲೂಕು ಆರೋಗ್ಯ ಅಧಿಕಾರಿ ವೆಂಕಟೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

 

Leave a Reply

Your email address will not be published.