ನಿತ್ಯವಾಣಿ, ಚಿತ್ರದುರ್ಗ,(ಜೂ. 26) : ಕೋವಿಡ್ ಇನ್ನು ಸಂಪೂರ್ಣ ಜನರಿಂದ ದೂರ ಹೋಗಿಲ್ಲ, ಮೈ ಮರೆತು ತಿರುಗಾಡಬೇಡಿ ಎಂದು ಸಾರ್ವಜನಿಕರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿವಿ ಮಾತು ಹೇಳಿದ್ದಾರೆ.
ನಗರದ ಐಯುಡಿಪಿ ಯ 6ನೇ ಕ್ರಾಸ್ ಬಳಿ ಶ್ರೀ ಗಣೇಶ ದೇವಸ್ಥಾನ ಬಳಿ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಎಲ್ಲಾರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ, ಅಂತರ ಕಾಪಾಡಿಕೊಳ್ಳಿ, ಮನೆಯಲ್ಲಿ ಇರಿ ಕೋವಿಡ್ ಇನ್ನು ಸಂಪೂರ್ಣ ಜನರಿಂದ ದೂರ ಹೋಗಿಲ್ಲ, ಮೈ ಮರೆತು ತಿರುಗಾಡಬೇಡಿ, ಎಲ್ಲರೂ ಮನೆಯಲ್ಲಿ ಇರಿ ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ ಎಂದರು.
ನರೇಂದ್ರ ಮೋದಿ ಅವರು ಎಲ್ಲಾರಿಗೂ ಸಹ ಲಸಿಕೆ ಸಿಗಬೇಕೆಂದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸಹ ಲಸಿಕೆ ನೀಡಲು ತಿರ್ಮಾನಿಸಿ ಮಹತ್ವದ ಹೆಜ್ಜೆ ಹಾಕಿರುವುದು ಶ್ಲಾಘನೀಯ ಎಂದು ತಿಳಿಸಿ ನಗರದಲ್ಲಿ ಎಲ್ಲರಿಗೂ ಸಹಾ ಲಸಿಕೆ ನೀಡಲಾಗುವುದು ಆತಂಕ ಪಡುವುದು ಬೇಡ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ನಗರಸಭೆ ಸದಸ್ಯ ಬಾಸ್ಕರ್, ಡಿಹೆಚ್‍ಓ ರಂಗನಾಥ್ , ಟಿಹೆಚ್‍ಓ ಗಿರೀಶ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಹಾಜರಿದ್ದರು.