ನಿತ್ಯವಾಣಿ, ಚಿತ್ರದುರ್ಗ, (ಮೇ. 16) : ಕರೊನಾ ಎರಡನೆಯ ಅಲೆಯ ಆವಾಂತರಕ್ಕೆ ಇಡೀ ಪ್ರಪಂಚವೇ ತತ್ತರಿಸಿಹೋಗಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೊದಲನೆಯ ಸಾಲಿನಲ್ಲಿ ನಿಂತು ಕೆಲಸ ನಿರ್ವಹಿಸುತ್ತಿರುವ ಕರೋನಾ ಯೋಧರಿಗೆ, ಹಾಗೂ ಜೀವದ ಹಂಗು ತೊರೆದು ಸಮರೋಪಾದಿಯಲ್ಲಿಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ದೊಡ್ಡ ಸಮುದಾಯಕ್ಕೆ ಕರೊನಾ ಬಾಧಿತರಾದಾಗ ಯಾವುದೇ ರೀತಿಯ ಕನಿಷ್ಠ ಆರೋಗ್ಯ ಸೇವೆಗಳನ್ನು ಹಾಗೂ ಕನಿಷ್ಠ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳದೆ ನಿರ್ಲಕ್ಷಿಸಲಾಗುತ್ತಿದೆ.
ಇದರಿಂದಾಗಿ ಕೊವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ನೌಕರರು ಹಾಗೂ ಅಗತ್ಯ ಸೇವೆ ಸಲ್ಲಿಸುತ್ತಿರುವ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ
ಕರೊನಾ ಮಹಾಮಾರಿಗೆ ತುತ್ತಾಗಿ ಸರಿಯಾದ ಬೆಡ್ಡು, ಆಕ್ಸಿಜನ್, ಸಿಗದೇ ಸಾವಿಗೀಡಾಗುತ್ತಿರುವ ಸಂಗತಿಗಳು ದಿನನಿತ್ಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ನೋಡಿ ಈಗಾಗಲೇ ಮೊದಲನೆಯ ಸಾಲಿನಲ್ಲಿ ನಿಂತು ಕೆಲಸ ನಿರ್ವಹಿಸುತ್ತಿರುವ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಕರೊನಾ ಯೋಧರು, ಅಗತ್ಯ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರು, ಭಯಭೀತರಾಗಿ
ನಮ್ಮ ಆರೋಗ್ಯದ ಬಗ್ಗೆ ಯಾವುದೇ ಬದ್ರತೆಯಿಲ್ಲದೆ ಹೇಗೆ ಕೆಲಸ ನಿರ್ವಹಿಸುವುದು ಎಂಬ ಆತಂಕ ಕರೊನಾ ಯೋಧರು, ಅಗತ್ಯ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಲ್ಲಿ ಮೂಡಿದೆ.
ಸರ್ಕಾರದ ಆದೇಶದಂತೆ ಕರೋನಾ ಕರ್ತವ್ಯದಲ್ಲಿ ನಿರತ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ 20 ಬೆಡ್ ಗಳನ್ನು ಕಾಯ್ದಿರಿಸುವ ಆದೇಶ ಸರಕಾರದಿಂದ ಆಗಿದೆ. ಆದರೆ ಈವರೆಗೂ ಆರೋಗ್ಯ ಇಲಾಖೆಯ ನೌಕರರಿಗೆ 20 ಹಾಸಿಗೆಗಳನ್ನು ಕಾಯ್ದಿರಿಸುವ ಬಗ್ಗೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಕೊವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಾ ಕೊವಿಡ್ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ನೌಕರರಿಗೆ ಚಿಕಿತ್ಸೆಯ ಬೆಡ್, ವೆಂಟಿಲೇಟರ್, ಆಕ್ಸಿಜನ್ ಈ ಯಾವುದೇ ಸೌಲಭ್ಯಗಳು ದೊರೆಯುವ ಕನಿಷ್ಠ ಗ್ಯಾರಂಟಿಯನ್ನು ನೀಡದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕರೊನಾ ನಿಯಂತ್ರಣ ಕಾರ್ಯದಲ್ಲಿ ಕರ್ತವ್ಯನಿರತ ಕರೋನಾ ಯೋಧರಿಗೆ ಹಾಗೂ ಮೊದಲನೆಯ ಸಾಲಿನಲ್ಲಿ ನಿಂತು ಅಗತ್ಯ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಕರೋನಾ ನಿಯಂತ್ರಣದ ಕೆಲಸದಲ್ಲಿ ಆತ್ಮಸ್ಥೈರ್ಯದಿಂದ ಕೆಲಸ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಅಧಿಕಾರಿಗಳನ್ನುಮನವಿಮಾಡಿಕೊಳ್ಳುತ್ತೇನೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಆದೇಶದಂತೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕರೋನಾ ಭಾದಿತರಾದ ಮೊದಲನೆಯ ಸಾಲಿನಲ್ಲಿ ನಿಂತು ಅಗತ್ಯ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ವಿಳಂಬಮಾಡದೆ ಆರೋಗ್ಯ ಸೇವೆಗಳನ್ನು ನೀಡಿ ಮತ್ತೆ ಉತ್ಸಾಹದಿಂದ ಕೆಲಸಕ್ಕೆ ಹಾಜರಾಗಲು ಕೋರಲಾಗಿದೆ, ಕಾರಣ ಕರೋನಾ ಕರ್ತವ್ಯನಿರತ ಕರೋಲಾ ಯೋಧರು ಹಾಗೂ ಅಗತ್ಯ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಮತ್ತು ನೌಕರರು ತಮ್ಮ ಸ್ವಯಂ ರಕ್ಷಣೆ ಹಾಗೂ ಕುಟುಂಬದ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಕರೊನಾ ನಿಯಂತ್ರಣದ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮುಖ್ಯ ಭಾಗವಾಗಿರುವ ಸರ್ಕಾರಿ ನೌಕರರ ಮೇಲಿದೆ. ಎಂದು ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷ ಕೆ ಮಂಜುನಾಥ್ ಪತ್ರಿಕೆ ಮುಕಾಂತರ ಒತ್ತಾಯಿಸಿದ್ದಾರೆ