ನಿತ್ಯವಾಣಿ,ಚಿತ್ರದುರ್ಗ,(ನ.22) : ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದಿಂದ ಕರೋನಾದಿಂದ ಮೃತಪಟ್ಟ ವಕೀಲರ ಸ್ಮರಣಾರ್ಥ ಹಾಗೂ ವಕೀಲರ ದಿನಾಚರಣೆಯ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ವಕೀಲರಿಗಾಗಿ ಜಿಲ್ಲಾ ಪೊಲಿಸ್ ಕವಾಯಿತು ಮೈದಾನದಲ್ಲಿ ಏರ್ಪಡಿಸಲಾಗಿತ್ತು
ಈ ಕ್ರಿಕೆಟ್ ಟೂರ್ನಮೆಂಟ್ ಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ವೃತ್ತಿ ನಿರತ ಐದು ವಕೀಲರ ತಂಡಗಳು ಬಾಗವಹಿಸಿದ್ದವು
ಈ ಕ್ರಿಕೆಟ್ ಟೂರ್ನಮೆಂಟ್ ನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರೇಮಾವತಿ ಮನಗೂಳಿ ಬ್ಯಾಟ್ ಇಡಿದು ಬಾಲ್ ಹೊಡಿಯುವುದರ ಮೂಲಕ ಉದ್ಘಾಟನೆ ಮಾಡಿದರು ನಂತರ ಮಾತನಾಡಿ ಕ್ರೀಡೆಯಿಂದ ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ಸಿಗುತ್ತದೆ ತಾವು ಆಟವನ್ನು ಆಡುವಾಗ ಸೊಲು ಮತ್ತು ಗೆಲುವನ್ನು ಸಮಾನವಾಗಿ ಸ್ವಕರಿಸಬೇಕು ವಕೀಲರ ಸಂಘದಿಂದ ಇಂತಹ ಕ್ರೀಡೆಗಳು ನಡೆಯುತ್ತಿರುವುದು ಶ್ಲಾಘನೀಯ ಇನ್ನೂ ಹೆಚ್ಚು ಹೆಚ್ಚು ಇಂತಹ ಕ್ರೀಡೆಗಳು ಆಗಬೇಕು ಇಂತಹ ಸಂದರ್ಭಗಳಲ್ಲಿ ವಕೀಲರು ಹೆಚ್ಚು ಹೆಚ್ಚು ಬಾಗವಹಿಸಿದರೆ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ ಎಂದರು.
ಮುಖ್ಯ ಅಥಿತಿಯಾಗಿ ಪ್ರದಾನ ಸಿವಿಲ್ ನ್ಯಾಯಾಧೀಶರಾದ ಜಿತೇಂದ್ರನಾಥ್ ಬಾಗವಹಿಸಿದ್ದರು.
ಸಂಘದ ಅಧ್ಯಕ್ಷರಾದ ಸಿ ಶಿವುಯಾದವ್ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಕರೋನ ಎಂಬ ಮಾಹಾಮಾರಿಯ ಒಡೆತಕ್ಕೆ ಅನೇಕ ಜನ ನಮ್ಮ ಸಹಪಾಠಿ ವಕೀಲರನ್ನು ಕಳೆದುಕೊಂಡಿದ್ದೇವೆ ಅದ್ದರಿಂದ ಅನೇಕ ವಕೀಲರು ಅವರ ಸ್ಮರಣಾರ್ಥ ಕ್ರಿಕೆಟ್ ಟೂರ್ನಮೆಂಟ್ ಮಾಡಬೇಕು ಎಂದು ಮನವಿ ಮಾಡಿದರು ವಕೀಲರ ಮನವಿಗೆ ಸ್ಪಂದಿಸಿ ಈ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಯಿತು
ಇದರಲ್ಲಿ ಬಾಗವಹಿಸಿದ ತಂಡಗಳೆಂದರೆ
ಗಿಲ್ಲಿ ತಂಡ.ವಾಲ್ಮೀಕಿ ತಂಡ. ಅಪ್ಪು ತಂಡ. ಎಪ್ ಆರ್ ತಂಡ .ಎಂ ಕೆ ಎಲ್ ತಂಡಗಳು ಬಾಗವಹಿಸಿದ್ದವು
ಅದರಲ್ಲಿ ಕೊನೆಯದಾಗಿ ಪೈನಲ್ ಪಂದ್ಯದಲ್ಲಿ ಅಪ್ಪುತಂಡ ಮತ್ತು MKL ತಂಡಗಳು ಸೇಣಸಾಡಿ ಕೊನೆಗೆ M KL ತಂಡ ಜಯಶಾಲಿಯಾಗಿ ಹೊರಹೊಮ್ಮಿತು ಈ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ ನಮ್ಮ ಸಂಘದ ಪದಾಧಿಕಾರಿಗಳಿಗೆ ಈ ತಂಡಗಳನ್ನು ಸಂಘಟಿಸಿ ಸೌಹಾರ್ದಯುತವಾಗಿ ಪಂದ್ಯ ನಡೆಯಲು ಸಹಕರಿದ ಮಾಜಿ ವಕೀಲರ ಸಂಘದ ಅಧ್ಯಕ್ಷರಾದ ಎಸ್ ವಿಜಯಕುಮಾರ್ ಮತ್ತು ಮದ್ಯಾನದ ಉಪಹಾರ ನಿಡಿ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿದ P R ವೀರೇಶ್ P M ಹನುಮಂತರಾಯ ಸಿ ವೈ ರುದ್ರಪ್ಪ ಎಂ ಕೆ ಲೋಕೇಶ್ ಮಹೇಶ್ವರಪ್ಪ ಸಿ ಬಿ ನಟರಾಜ ಮತ್ತು ಸಹಕಾರ ನೀಡಿದ ಮತ್ತು ಕ್ರಿಕೆಟ್ ನಲ್ಲಿ ಬಾಗವಹಿಸಿ ಯಶಸ್ವಿ ಗೊಳಿಸಿದ ಎಲ್ಲಾ ವಕೀಲರಿಗೆ ಅಭಿನಂದನೆಗಳು ತಿಳಿಸಿದರು