ಮೊದಲ ದಿನ ನಡೆದ ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿಗಳ ಫಲಿತಾಂಶಗಳು ವಿವರಗಳು

 ಚಿತ್ರದುರ್ಗ, ನಿತ್ಯನಾಣಿ, ಎ. 3 : ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್  ಮೊದಲನೇ ಪಂದ್ಯದಲ್ಲಿ ವಿಜಾಪುರದ ಶ್ರೀರಾಮ ಸಿಸಿ ವಿರುದ್ಧ ಪಂದ್ಯದಲ್ಲಿ ಚಿತ್ರದುರ್ಗದ ಇಮ್ಮಡಿ ಶ್ರೀ ಕ್ರಿಕೆಟ್ ರ್ಸ ತಂಡ 28 ರನ್ನಗಳ ಜಯ ಪಡೆಯಿತು.  13 ಬಾಲ್ ಲ್ಲಿ 38ರನ್ನು ಬಾರಿಸಿದ ಹಾಗೂ 2 ವಿಕೆಟ್ ಪಡೆದ ಶ್ರೀ ಯಲ್ಲಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಎರಡನೇ ಪಂದ್ಯದಲ್ಲಿ ಹಿರಿಯೂರಿನ ದುರ್ಗನ್ ವಾರಿಯರ್ಸ್ ವಿರುದ್ಧ ಚಿತ್ರದುರ್ಗದ  ಶ್ರೀ ಪೈಟರ್ಸ್ 9 ರನ್ನುಗಳ ಜಯ ಪಡೆದರು. 9 ಬಾಲಲ್ಲಿ 18 ರನ್ನು ಪಡೆದು 1 ವಿಕೆಟ್ ಪಡೆದ ಪುನೀತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
 ಇನ್ನೂ ಎರಡು ಪಂದ್ಯಗಳ ಫಲಿತಾಂಶ ಬಾಕಿ ಇದ್ದು ಪಂದ್ಯಗಳ ನಂತರ ತಮಗೆ ಮಾಹಿತಿ ನೀಡಲಾಗುವುದು
 ಮೂರನೇ ಪಂದ್ಯದಲ್ಲಿ
ಶಿವಮೊಗ್ಗದ ಕ್ಷತ್ರಿಯ ವಿರುದ್ಧ ಶಿರಾ ಎಂ.ಪಿ.ಸಿ.ಸಿ  9ರನ್ನುಗಳ ಜಯ ಪಡೆಯಿತು. 27 ರನ್ನುಗಳು ಬಾರಿಸಿದ ರಾಜಶೇಖರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ನಾಲ್ಕನೇ ಪಂದ್ಯದಲ್ಲಿ ಜಯ ಕರ್ನಾಟಕ ಅರಸೀಕೆರೆ ತಂಡದವರು
ಯುವ ಗಜನನ ತುಮಕೂರು ತಂಡದ  ವಿರುದ್ಧ 25 ರನ್ನುಗಳ ಜಯ ಸಾಧಿಸಿರುತ್ತಾರೆ. 13 ರನ್ ಹಾಗೂ ಎರಡು ವಿಕೆಟ್ ಪಡೆದ ಮೀನಾಕ್ಷ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
 5 ನೇ ಪಂದ್ಯದಲ್ಲಿ ಬ್ಲಾಸ್ಟರ್ಸ್ ತಂಡದವರು ಶ್ರೀ ಫೈಟರ್ಸ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿದರು. ಅಜೇಯ 13 ರನ್ ಗಳಿಸಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಉಮೇಶ್ ಪಂದ್ಯ ಶ್ರೇಷ್ಠಪ್ರಶಸ್ತಿ ಪಡೆದರು.

Leave a Reply

Your email address will not be published.