ದಕ್ಷಿಣ ಕನ್ನಡ: ಕರಾವಳಿ ಅಂದ್ರೆ ದೈವ-ದೇವರುಗಳ ನಾಡು. ಇಲ್ಲಿನ ದೈವ ಆರಾಧನೆಗೆ ತನ್ನದೆ ಆದ ಐತಿಹ್ಯ ಇದೆ. ದೈವಗಳ ವಿಚಾರದಲ್ಲಿ ಇಲ್ಲಿನ ಜನರಿಗೆ ಇರುವ ನಂಬಿಕೆ ಅಪಾರ. ಅಷ್ಟೆ ಕಟ್ಟುನಿಟ್ಟಾಗಿ ಆಚರಣೆ ಮಾಡುತ್ತಾರೆ. ಆದ್ರೆ ಅದೊಂದು ತಂಡ ಇದೆ. ಆ ತಂಡ ಇದಕ್ಕೆ ಅಪಮಾನ ಮಾಡುತ್ತಾ ಬಂದಿದೆ. ಅಲ್ಲದೇ ಹುಂಡಿಯ ಹಣ ಕದ್ದು ಮಾಡುತ್ತಿದ್ದ ಅಪಚಾರ ಅಸಹ್ಯಕರವಾಗಿತ್ತು. ಆದ್ರೆ ಪೊಲೀಸರು ಇವರ ಹೆಡೆಮುರಿ ಕಟ್ಟಲು ಸಿದ್ದರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವ ದೇವರುಗಳನ್ನು ನಂಬುವ ಪರಂಪರೆ ಬಹಳ ಹಿಂದಿನಿಂದಲೂ ಬಂದಿದ್ದು, ಇಲ್ಲಿನ ದೈವ ದೇವರುಗಳಿಗೆ ಕಟ್ಟುನಿಟ್ಟಾಗಿ ನಡೆದುಕೊಳ್ಳಲಾಗುತ್ತದೆ. ಆದ್ರೆ ಇತ್ತೀಚೆಗೆ ಒಂದು ತಂಡ ದೈವಸ್ಥಾನ ಮತ್ತು ದೇವಸ್ಥಾನಗಳ ಹುಂಡಿ ಕಳ್ಳತನ ಮಾಡುತ್ತಿತ್ತು. ಇದು ಅಷ್ಟೊಂದು ದೊಡ್ಡ ವಿಚಾರವಾಗಿರಲಿಲ್ಲ. ಯಾಕಂದ್ರೆ ದೇವಸ್ಥಾನದ ಹುಂಡಿ ಕಳ್ಳತನ ಮಾಡೋದು ನಡೆಯುತ್ತಲೇ ಬಂದಿದೆ. ಆದರೆ, ಈ ಕಳ್ಳರು ಮಾಡಿದ ಅದೊಂದು ಕೆಲಸ ಇಡೀ ಭಕ್ತಗಣವನ್ನು ಆಕ್ರೋಶಭರಿತಗೊಳಿಸಿತ್ತು. ಅದೇನಂದ್ರೆ ಹುಂಡಿಗೆ ಕನ್ನ ಹಾಕಿ ಆ ಹುಂಡಿಗೆ ಮೂತ್ರ ವಿಸರ್ಜನೆ ಮಾಡಿ ಹೋಗುವ ಚಾಳಿ ಈ ಕಳ್ಳರದ್ದಾಗಿತ್ತು. ಇನ್ನು ಶಾಕಿಂಗ್ ವಿಚಾರ ಅಂದ್ರೆ ಭಕ್ತರ ಸೋಗಿನಲ್ಲಿ ಬಂದ ಕ್ರಿಮಿಗಳು ಹುಂಡಿಗೆ ಬಳಸಿದ ಕಾಂಡೋಮ್ ಗಳನ್ನು ಹಾಕಿ ಹೋಗುತ್ತಿದ್ದರು. ಮಂಗಳೂರು ಹೊರವಲಯದ ಕೋಣಾಜೆ ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗಳ ದೈವಸ್ಥಾನಗಳಲ್ಲಿ ದುಷ್ಕರ್ಮಿಗಳು ಈ ರೀತಿಯ ಹೀನ ಕೆಲಸವನ್ನು ಮಾಡಿದ್ರು ಮತ್ತು ಕೆಲವು ಕೆಡ ಹುಂಡಿ ಕಳ್ಳತನವಾಗಿತ್ತು. ಹುಂಡಿ ಕಳ್ಳತನ ಮಾಡಿ ಮೂತ್ರ ಮಾಡಿದ ಪಾಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಸುಹೈಲ್(19)ನಿಝಾಮುದ್ದೀನ್. ತಲಪಾಡಿ ಬಳಿಯ ಕೆ.ಸಿ.ರೋಡ್ ನಿವಾಸಿಗಳು. ಕಳೆದ ವರ್ಷದ ನವಂಬರ್ ನಲ್ಲಿ ಇವರು ಮಾಡೂರಿನಲ್ಲಿ ರಸ್ತೆ ಬದಿಯಲ್ಲಿದ್ದ ಹುಂಡಿ, ಕುತ್ತಾರು ಆದಿಸ್ಥಳ ಕೊರಗಜ್ಜ ಸ್ವಾಮಿ ದೇವಸ್ಥಾನ, ದೇರಳಕಟ್ಟೆ ಅಯ್ಯಪ್ಪಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಕಡೆ ಇವರು ಹುಂಡಿ ಹಣವನ್ನು ಕದ್ದಿದ್ದರು. ಇನ್ನು ಹುಂಡಿಯಲ್ಲಿ ಹೆಚ್ಚು ಹಣ ಸಿಗದಿದ್ದಾಗ ಅದಕ್ಕೆ ಮೂತ್ರ ಮಾಡಿ ಬರುತ್ತಿದ್ದರು.ಈ ಬಗ್ಗೆ ದಾಖಲಾಗಿದ್ದ ದೂರನ್ನು ಆಧರಿಸಿ ಇವರನ್ನು ಬಂಧಿಸಲಾಗಿದೆ. ಇನ್ನು ಕಾಂಡೋಮ್ ಹಾಕಿದ್ದು ನಾವಲ್ಲ ಅಂತಾ ಇವರು ಹೇಳಿದ್ದು ಆ ತಂಡವನ್ನು ಹಿಡಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇನ್ನು ಹುಂಡಿ ಕದ್ದ ಕಳ್ಳರಿಗೆ ಮಂಗಳೂರಿನ 6 ಪೊಲೀಸ್ ಠಾಣೆಗಳಲ್ಲಿ ಕ್ರೈಂ ಹಿಸ್ಟರಿ ಇದೆ. ಇನ್ನು ಈ ತಂಡದಲ್ಲಿ ಸಾಕಷ್ಟು ಜನರಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಅವರೆಲ್ಲರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅದೇನೆ ಇದ್ರು ಹುಂಡಿಯನ್ನು ಮಾತ್ರ ಕದ್ದಿದ್ರೆ ಇವರನ್ನು ದೇವರು ಕ್ಷಮಿಸಿಸುತ್ತಿದ್ದರು ಅನ್ಸುತ್ತೆ. ಆದ್ರೆ ಇವರು ಮಾಡಿದ ಕೊಳಕು ಕೆಲಸ ದೇವರು ಕೂಡ ಕ್ಷಮಿಸೋದಿಲ್ಲ ಅಂದ್ರೆ ತಪ್ಪಾಗಲ್ಲ.