ಬೆಂಗಳೂರು- ಸರ್ಕಾರಿ ಉದ್ಯೋಗದ ಆಮೀಷವೊಡ್ಡಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ‘ಸೆಕ್ಸ್ ಹಗರಣ’ ಬಟಾ ಬಯಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬಾತ ಸಿಡಿ ಸಹಿತ ಸೆಕ್ಸ್ ಹಗರಣವನ್ನು ಬಯಲಿಗೆಳೆದಿದ್ದಾರೆ.
ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡುವುದಾಗಿ ಅಥವಾ ಕಿರುತೆರೆಯಲ್ಲಿ ಅವಕಾಶ ಕೊಡಿಸುವುದಾಗಿ ರಮೇಶ್ ಜಾರಕಿಹೊಳಿ ಆಮೀಷವೊಡ್ಡಿ ಯುವತಿಯೊಂದಿಗೆ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದ ಯುವತಿ ಕಿರುತೆರೆಯಲ್ಲಿ ಅವಕಾಶ ಕೊಡಿಸುವಂತೆ ರಮೇಶ್ ಜಾರಕಿಹೊಳಿ ಬಳಿ ಹೋಗಿದ್ದಾಳೆ.
ಆಗ ಕೆಪಿಟಿಸಿಎಲ್ ನಲ್ಲಿ
ಕೆಲಸ ಕೊಡಿಸುವ ಆಮಿಷವೊಡ್ಡಿದ ರಮೇಶ್ ಜಾರಕಿಹೊಳಿ ಆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ತರುವಾಯ ಕೆಲಸ ಕೇಳಿದ್ದಾಗ ಯು ಟರ್ನ್ ಹೊಡೆದಿದ್ದಾರೆ. ಈ ವಿಚಾರದಲ್ಲಿ ನನ್ನ ಬಳಿ ಮತ್ತೆ ಬಂದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ನ್ಯಾಯ ಕೊಡಿಸುವಂತೆ ಆ ಯುವತಿ ದಿನೇಶ್ ಕಲ್ಲಹಳ್ಳಿ ಬಳಿ ಕೋರಿದ್ದಾಳಂತೆ.
ಆ ಯುವತಿ ಜೊತೆ ಅರೆ ಬೆತ್ತಲಾಗಿರುವ ರಮೇಶ್ ಜಾರಕಿಹೊಳಿ ಜೊತೆಗಿನ ವಿಡಿಯೋ ಮತ್ತು ಕೆಲವು ಆಡಿಯೋ ಸಂಭಾಷಣೆ ಇರುವ ಸಿಡಿ ಜೊತೆ ದಿನೇಶ್ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೋಲಿಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ.
ಅಲ್ಡಿದೆ ಡಿಸಿಪಿ ಅನುಚೇತ್ ಅವರಿಗೆ ಕೂಡ ಸೆಕ್ಸ್ ಸಿಡಿಗಳನ್ನು ದಿನೇಶ್ ಸಲ್ಲಿಸಿದ್ದಾರೆ.
ಈಗ ರಮೇಶ್ ತಲೆದಂಡವಾಗುತ್ತಾ ಅಥವಾ ಬಿಜೆಪಿ ಸರ್ಕಾರ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುತ್ತಾ ಕಾದು ನೋಡಬೇಕು