ಜಲ್ಲಿ ಕ್ರಷರ್​ಗೆ ಇಬ್ಬರು ಬಲಿ!

ಶಿವಮೊಗ್ಗ:- ಹೊಟ್ಟೆಪಾಡಿಗಾಗಿ ಊರು ಬಿಟ್ಟು ಬಂದವರು ಕೆಲಸ ಮಾಡುತ್ತಲೇ ಸಮಾಧಿಯಾದ ಘಟನೆ ನಗದ ಹೊರವಲಯದ ಗೆಜ್ಜೇನಹಳ್ಳಿಯಲ್ಲಿ ಸಂಭವಿಸಿದೆ. ಗೆಜ್ಜೇನಹಳ್ಳಿಯ ಕ್ರಷರ್​ನಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತಪಟ್ಟಿದ್ದಾರೆ.ಅಸ್ಸಾಂನ ಚಿರಾಂಗ್​ ಜಿಲ್ಲೆಯ ಬುಂಜಲ್​ ಗ್ರಾಮದ ದ್ವಿಕೊಲಾಂಗ್​ (25) ಹಾಗೂ ಪ್ರೆಸಿಂಗ್​ಟೋನ್​ (25) ಮೃತರು. ಆರು ತಿಂಗಳಿಂದ ಇಬ್ಬರೂ ಕ್ರಷರ್​ನಲ್ಲಿ ಕೆಲಸ ಮಾಡುತ್ತಿದ್ದರು. ಕ್ರಷರ್​ನಲ್ಲಿ ಕಟ್ಟಿದ ಜಿಂಕ್​ಶೀಟ್​ಗೆ ಮಂಗಳವಾರ ಜೆಲ್ಲಿ ಕಲ್ಲು ತುಂಬಿದ ಟ್ರ್ಯಾಕ್ಟರ್​ ತಾಗಿದ್ದರಿಂದ ಮಣ್ಣು ಕುಸಿದಿದೆ. ಇದರಿಂದ ಜಿಂಕ್​ಶೀಟ್​ ಮತ್ತು ಕಲ್ಲುಗಳು ಕೂಡ ಕೆಳಕ್ಕೆ ಜರಿದಿವೆ.ಅವಘಡದಲ್ಲಿ ದ್ವಿಕೊಲಾಂಗ್​ ಸ್ಥಳದಲ್ಲಿಯೇ ಮೃತಪಟ್ಟರೆ, ಆಸ್ಪತ್ರೆಗೆ ದಾಖಲಾಗಿದ್ದ ಪ್ರೆಸಿಂಗ್​ಟೋನ್​ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕ್ರಷರ್​ ಮಾಲೀಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.