ಮುಂಬೈ : 80 ಕೋಟಿ ರೂ. ವಿದ್ಯುತ್ ಬಿಲ್ ಪಡೆದ ಮನೆಯ ಯಜಮಾನನ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಸೇರಿದ ಘಟನೆ ಫೆ. 22 ರಂದು ಮಹಾರಾಷ್ಟ್ರದ ನಲಸೊಪಾರಾ ಗ್ರಾಮದಲ್ಲಿ ನಡೆದಿದೆ.
80 ವರ್ಷದ ವೃದ್ಧ ಗಂಪತ್ ನಾಯ್ಕ್, 80 ಕೋಟಿ ರೂ. ವಿದ್ಯುತ್ ಬಿಲ್ ನೋಡಿ ಶಾಕ್ ಆಗಿದ್ದಾರೆ. ಅವರ ಬಿಪಿ ಹೆಚ್ಚಿದ್ದರಿಂದ ಮನೆಯವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಪತಿ ನಾಯ್ಕ್ ಅವರದು ಮಧ್ಯಮವರ್ಗದ ಕುಟುಂಬ. ಅವರ ಮನೆಗೆ 80 ಕೋಟಿ ರೂ. ವಿದ್ಯುತ್ ಬಿಲ್ ಬಂದಿರುವುದು ತಾಂತ್ರಿಕ ದೋಷದಿಂದ.
ಘಟನೆ ಕುರಿತು ಮಾತಾಡಿರುವ ಗಂಪತ್ ನಾಯ್ಕ್ ಅವರ ಮೊಮ್ಮಗ ನೀರಜ್, ಮೊದಲು ಇಡೀ ಗ್ರಾಮದ ಕರೆಂಟ್ ಬಿಲ್ ಇರಬಹುದು ಎಂದುಕೊಂಡಿದ್ದೇವು. ಆದರೆ, ಕ್ರಾಸ್ ಚೆಕ್ ಮಾಡಿದ ಮೇಲೆ ಅದು ಕೇವಲ ನಮ್ಮ ಮನೆಯ ಬಿಲ್ ಎಂದು ಗೊತ್ತಾಗಿ ಆಘಾತವಾಯಿತು. ಕೂಡಲೇ ಅಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು.
ಇನ್ನು ತಮ್ಮ ತಪ್ಪು ಒಪ್ಪಿಕೊಂಡಿರುವ ಮಹಾರಾಷ್ಟ್ರ ವಿದ್ಯುತ್ ಸರಬರಾಜು ಕಂಪನಿ (MSEDCL), ತಾಂತ್ರಿಕ ದೋಷದಿಂದ ಈ ಪ್ರಮಾದ ಜರುಗಿದೆ. ಈಗಾಗಲೇ ಅವರಿಗೆ ಸರಿಯಾದ ಬಿಲ್ ವಿತರಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸುತ್ತೇವೆ ಎಂದಿದೆ.