ಬೆಂಗಳೂರು : ಕಳೆದ ವರ್ಷ ಮಾಜಿ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವಂತ ಹ್ಯಾಕರ್ಸ್ 2.13 ಲಕ್ಷ ರೂಪಾಯಿ ಕದ್ದಿರುವುದಾಗಿ, ದೂರು ನೀಡಿದ್ದಾರೆ.ಕಳೆದ 2020ರ ಜುಲೈನಲ್ಲಿ ಈ ಸೈಬರ್ ವಂಚನೆ ನಡೆದಿದ್ದು, ಮಾಜಿ ರಾಜ್ಯ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್ ಸಿಂಗ್ ದೂರಿನ ಆಧಾರದ ಮೇಲೆ, ಸೋಮವಾರ ಪೂರ್ವ ಸಿಇಎನ್ ಪೊಲೀಸ್ ಉಪ ಪೊಲೀಸ್ ಆಯುಕ್ತರ(ಪೂರ್ವ) ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅವರು ನೀಡಿರುವಂತ ದೂರಿನಲ್ಲಿ, ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಗೆ ನೀಡಿರುವಂತ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಸಂದೇಶ ರವಾನೆಯಾಗಿತ್ತು. ಅದರಲ್ಲಿ ಬ್ಯಾಂಕ್ ಖಾತೆಯ ಓಟಿಪಿ ಕೂಡ ಸೇರಿದ್ದವು. ಸುಮಾರೂ 50 ರಿಂದ 61 ಓಟಿಪಿ ಬ್ಯಾಂಕ್ ಹಣ ವರ್ಗಾವಣೆ ಸಂಬಂಧ ಬಂದಿದ್ದವು. ಅದು ರಾತ್ರಿ 11.15ರಿಂದ 11.30ರ ಜುಲೈ ನಲ್ಲಿ ಎಂಬುದಾಗಿ ತಿಳಿಸಿದ್ದಾರೆ.ಈ ಬಳಿಕ ಮಾರನೇ ದಿನ ಬ್ಯಾಂಕ್ ಗೆ ಹೋಗಿ ಈ ಬಗ್ಗೆ ವಿಚಾರಿಸಿದಾಗ, ನನಗೆ ಶಾಕ್ ಆಯ್ತು. ನನ್ನ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡಿದ್ದಂತ ಸೈಬರ್ ವಂಚಕರು, ನನ್ನ ಬ್ಯಾಂಕ್ ಖಾತೆಯಿಂದ 2.13 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾಗಿ ತಿಳಿಯಿತು ಎಂಬುದಾಗಿ ಹೇಳಿದ್ದಾರೆ.