ಚಿತ್ರದುರ್ಗ- ಸೈಬರ್ ಪೊಲೀಸ್ ಸ್ಟೇಷನ್ ಮತ್ತು ನಾರ್ರ್ಕೋಟಿಸ್ ಡ್ರಗ್ ಅಬ್ಯೂಸ್ ಅವರ್ನೆಸ್ ಬಗ್ಗೆ ನಮ್ಮ ಪೊಲೀಸ್ ಸ್ಟೇಷನ್ ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸೈಬರ್ ಸಂಬಂದಿಸಿದ ಅಪೆನ್ಸ್ ಗಳನ್ನು ಫೇಸ್ ಮಾಡುತಿದ್ದೇವೆ. ಆದ್ದರಿಂದ ಯಾವ ರೀತಿ ಸುರಕ್ಷತೆಯಿಂದ ಇರಬೇಕು ಎಂದು ನೀವೇ ನಿರ್ಧಾರ ಮಾಡಬೇಕು ಈಗಿನ ದಿನಗಳಲ್ಲಿ ಇಂಟರ್ನೆಟ್ ತುಂಬಾ ಮಹತ್ವ ಹೊಂದಿದೆ, ಆದರೆ ಇಂಟರ್ನೆಟ್ ಬೇಕೋ ಅಥವಾ ಬೇಡವೋ ಎನ್ನುವುದು ನೀವೇ ನಿರ್ಧರಿಸಿಬೇಕು ಎನ್ನವುದು ಪ್ರಶ್ನೆ ಆಗಿದೆ? ಈ ದಿನಗಳಲ್ಲಿ ಎಷ್ಟೊಂದು ಸೈಬರ್ ಕ್ರೈಂ ಮಾಡುತ್ತಿದ್ದಾರೆ. ಹಣ ತೆಗೆದುಕೊಳ್ಳುತ್ತಾರೆ, ಮೋಸ ಮಾಡುತ್ತಿದ್ದಾರೆ, ಆದ್ದರಿಂದ ನಾವು ಅಂತರ್ಜಾಲದಲ್ಲಿ ಇರಬೇಕು ಅಥವಾ ಬೇಡವೋ ಎಂದು ಅಲ್ಲಿ ನೆರೆದಿದ್ದ ಮಕ್ಕಳಲ್ಲಿ ಪ್ರಶ್ನೆ ಮಾಡಿದರು.
ಆದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಇಂಟರ್ನೆಟ್ ಅವಶ್ಯಕತೆ ಬೇಕಾಗಿದೆ, ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಭವಿಷ್ಯದಲ್ಲಿ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ಇಂಟರ್ನೆಟ್ ಅಗತ್ಯ, ಆದರೆ ವಿದ್ಯಾರ್ಥಿಗಳೇ ಆನ್ಲೈನ್ ಮೊಬೈಲ್ ಗೇಮ್ ಗೆ trap ಆಗಬೇಡಿ, ಯಾವುದೇ ಬ್ಯಾಂಕ್ ನಲ್ಲಿ otp ಕೇಳುವುದಿಲ್ಲ, ಹಾಗೇನಾದರೂ ನಿಮ್ಮ ಮೊಬೈಲ್ ನಲ್ಲಿ ಮೆಸೇಜ್ ಬಂದರೆ ಕೊಡಬೇಡಿ. ನಿಮ್ಮ ಬ್ಯಾಂಕಿನಲ್ಲಿವಿಚಾರಿಸಿ , ಇದೇ ತರ ಓಟಿಪಿ ನಂಬರ್ ಕೊಟ್ಟು 500000 ಲಕ್ಷ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ ಅಂತ ಇದೇ ತರ ಅನೇಕ ಜನರು ನಮ್ಮ ಸೈಬರ್ ಪೊಲೀಸ್ ಸ್ಟೇಷನ್ ಗೆ ದೂರುಗಳು ಬಂದಿರುತ್ತವೆ ಆಕಸ್ಮಾತ್ ಗೊತ್ತಿಲ್ಲದೆ ನಂಬರ್ ಕೊಟ್ಟಾಗ ಬ್ಯಾಂಕಿನವರಿಗೆ ಹೇಳಿ ನಮ್ಮ ಬ್ಯಾಂಕಿನ ಖಾತೆ ಬ್ಲಾಕ್ ಮಾಡಿಸಬೇಕು ನಂತರ ಚಿತ್ರದುರ್ಗ ಸೈಬರ್ ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟು ರಿಜಿಸ್ಟ್ರೇಷನ್ ಮಾಡಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ರಾಧಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು