ನಿತ್ಯವಾಣಿ, ಬೆಂಗಳೂರು,( ಜೂನ್ 4, 2021) : ಪ್ರಪಂಚದ ಅತಿದೊಡ್ಡ ಕಾರ್ಬನ್ ನ್ಯೂಟ್ರಲ್ ಅಗರಬತ್ತಿ ತಯಾರಕರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎನ್‍ಆರ್ ಸಮೂಹದ ಒಡೆತನದಲ್ಲಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ ಭಾರತೀಯ ಪರಿಸರ ವ್ಯವಸ್ಥೆಯಲ್ಲಿ ಸುಸ್ಥಿರ ಭವಿಷ್ಯವನ್ನು ಪ್ರಾರಂಭಿಸುವ ತನ್ನ ಬದ್ಧತೆಯತ್ತ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. 71 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬ್ರಾಂಡ್, ತನ್ನ ಸಮರ್ಥನೀಯ ಅಭ್ಯಾಸಗಳ ಮೂಲಕ ಇಂಗಾಲದ ಹೆಜ್ಜೆಗುರುತನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದೆ ಮತ್ತು ಜಗತ್ತಿನಲ್ಲಿಯೇ ಕಾರ್ಬನ್ ನ್ಯೂಟ್ರಲ್ ಅಗರಬತ್ತಿ ಉತ್ಪಾದಕ ಎಂದು ಪ್ರಮಾಣೀಕರಿಸಲ್ಪಟ್ಟಿದೆ.ಸಮರ್ಥನೀಯ ಬೆಳವಣಿಗೆಯ ಮುಂದಿನ ಹೆಜ್ಜೆಯಾಗಿ, ಸೈಕಲ್ ಪ್ಯೂರ್‍ನ ಉತ್ಪಾದನೆಯ ಸಮಯದಲ್ಲಿ ಮರು?ಬೆಳೆದ ಕಾಡುಗಳಿಂದ ಮಾತ್ರ ಕಚ್ಚಾ ಸಾಮಗ್ರಿಗಳನ್ನು ಪಡೆಯಲಾಗುತ್ತಿದೆಯೇ ಹೊರತು ಮೂಲ?ಕಾಡುಗಳಿಂದ ಅಲ್ಲ ಎನ್ನುವುದನ್ನು ಖಚಿತಪಡಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಸೈಕಲ್ ಪ್ಯೂರ್‍ನ ಎಲ್ಲಾ ಉತ್ಪನ್ನಗಳು/ಪ್ಯಾಕೇಜಿಂಗ್ ಸಾಮಗ್ರಿಗಳು ಫಾರೆಸ್ಟ್ ಸ್ಟೇವಾರ್ವಾರ್ಡ್ಶಿಪ್ ಕೌನ್ಸಿಲ್ (ಎಫ್‍ಎಸ್‍ಸಿ) ಮಂಡಳಿಯಿಂದ ಪ್ರಮಾಣಿತಗೊಂಡಿವೆ.
ಈ ಸಂಸ್ಥೆಯ ಭಾರತ ಕಾರ್ಯಾಚರಣೆ ಮತ್ತು ವ್ಯಾಪ್ತಿಯನ್ನು ಗುರುತಿಸಿ ISO 45001: 2018 ಮತ್ತು 14001:2015ರ ಪ್ರಮಾಣೀಕರಣವನ್ನು ಸಹ ನೀಡಲಾಗಿದೆ. ವಿಶ್ವದ ಎಫ್‍ಎಂಸಿಜಿ ವಲಯದಲ್ಲಿ ISO 45001: 2018 ಪ್ರಮಾಣೀಕರಣವನ್ನು ಸಾಧಿಸಿದ ಮೊದಲ ಭಾರತೀಯ ಸಂಸ್ಥೆ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಮಾನ್ಯತೆಯು ಸಂಸ್ಥೆಯ ವ್ಯವಹಾರ ಯೋಜನೆ ಮತ್ತು ದಿನನಿತ್ಯದ ಕಾರ್ಯಾಚರಣೆಗಳ ವಿಷಯದಲ್ಲಿನ ಪರಿಣಾಮಕಾರಿ ಸಮಗ್ರ ನಿರ್ವಹಣಾ ವ್ಯವಸ್ಥೆಯನ್ನು ತೋರಿಸುತ್ತದೆ.
ಸೈಕಲ್ ಪ್ಯೂರ್ ಅಗರಬತ್ತೀಸ್ ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ, ಮತ್ತು ಪ್ರತಿವರ್ಷ 12 ಬಿಲಿಯನ್ ಅಗರಬತ್ತಿಗಳನ್ನು ತಯಾರಿಸುತ್ತದೆ. ಸೈಕಲ್ ಪ್ಯೂರ್ ಜೀವನದ ಎಲ್ಲಾ ಹಂತಗಳಲ್ಲಿ ಗ್ರಾಹಕರ ಆದ್ಯತೆಗಳನ್ನು ತಲುಪುತ್ತದೆ ಮತ್ತು ಪ್ರಪಂಚದಲ್ಲಿಯೇ ಅತಿದೊಡ್ಡ ಅಗರಬತ್ತಿ ರಫ್ತುದಾರನಾಗಿ ಗುರುತಿಸಿಕೊಂಡಿದೆ. ಸಮಗ್ರತೆ, ಗುಣಮಟ್ಟ, ಗ್ರಾಹಕರ ಸ್ಪಂದನೆ, ಪ್ರತಿಕ್ರಿಯೆ ಮತ್ತು ಮುಖ್ಯವಾಗಿ, ಬದ್ಧತೆಗಳನ್ನು ಗೌರವಿಸುವುದು ಮತ್ತು ಸಾಮಾಜಿಕ ಕಾರಣಗಳಿಗಾಗಿ ನಿಜವಾದ ಕಾಳಜಿ ಸೇರಿದಂತೆ ಇಂತಹ ಸಂಸ್ಥಾಪಕರ ಮಾರ್ಗದರ್ಶಿ ತತ್ವಗಳಲ್ಲಿ ಈ ಬ್ರಾಂಡ್‍ನ ಬೆಳವಣಿಗೆ ಅಡಗಿದೆ.
ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸೈಕಲ್ ಪ್ಯೂರ್ ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗ, `ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ ನಾವು, ಯಾವಾಗಲೂ ಸುಸ್ಥಿರ ಆಚರಣೆಗಳೆಡೆಗೆ ಜಾಗೃತ ಪ್ರಯತ್ನಗಳನ್ನು ಮಾಡುತ್ತ ಬಂದಿದ್ದೇವೆ. ಫಾರೆಸ್ಟ್ ಸ್ಟೇವಾರ್ವಾರ್ಡ್ಶಿಪ್ ಕೌನ್ಸಿಲ್‍ನಿಂದ (ಎಫ್‍ಎಸ್‍ಸಿ) ದೊರೆತ ಪ್ರಮಾಣಪತ್ರ ಮತ್ತು ಐಎಸ್‍ಒ ಪ್ರಮಾಣಪತ್ರಗಳು ಸಮರ್ಥನೀಯ ಭವಿಷ್ಯವನ್ನು ಸೃಷ್ಟಿಸುವ ನಮ್ಮ ಪ್ರಯತ್ನವನ್ನು ಬೆಂಬಲಿಸಿವೆ. ಉದ್ಯಮದ ಪ್ರವರ್ತಕರಾಗಿ, ನಾವು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತರಲು ಶ್ರಮಿಸುತ್ತಿದ್ದೇವೆ’ ಎಂದರು.
ಸೈಕಲ್ ಪ್ಯೂರ್ ಯಾವಾಗಲೂ ತನ್ನ ಪ್ರಕ್ರಿಯೆಗಳಲ್ಲಿ ಪರಿಸರ-ಸ್ನೇಹಿ ಕ್ರಮಗಳನ್ನು ಅನುಸರಿಸಲು ಶ್ರಮಿಸುತ್ತದೆ. ಇದರ ಜೊತೆಗೆ, ವೈವಿಧ್ಯಮಯ ಮತ್ತು ಸಂಕೀರ್ಣವಾದ ಸಾಮಾಜಿಕ ಉಪಕ್ರಮಗಳ ಬೆಂಬಲದೊಂದಿಗೆ ಬಲವಾದ ಬ್ರಾಂಡ್ ಉಪಸ್ಥಿತಿಯನ್ನು ರಚಿಸಲು ಪ್ರಯತ್ನಿಸುತ್ತಿದೆ. ತನ್ನ ಸಾಮಾಜಿಕ ಬದ್ಧತೆಯ ಭಾಗವಾಗಿ ಡಾಯ್ಚ್ ಕಿಂಡರ್‍ಲೈಫ್ ಉಷಾ ಕಿರಣ ಕಣ್ಣಿನ ಆಸ್ಪತ್ರೆ, ಕಲಿಸು ಫೌಂಡೇಶನ್ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿದೆ. ರಿಫಾರೆಸ್ಟ್ ಇಂಡಿಯಾ ಸಹಯೋಗದಲ್ಲಿ ಸೈಕಲ್ ಪ್ಯೂರ್, `ಕಾವರಿ ಕಥೆ’ (ದ ಸ್ಟೋರಿ ಆಫ್ ಕಾವೇರಿ) ಕಿರುಚಿತ್ರವನ್ನು ನಿರ್ಮಿಸಿದ್ದು, ಇದು ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿದೆ.