ನಿತ್ಯವಾಣಿ, ಚಿತ್ರದುರ್ಗ,(ಅ.11) : ಚಿತ್ರದುರ್ಗ ನಗರದ ಜೋಗಿಮಟ್ಟಿ ಮುಖ್ಯರಸ್ತೆ ರಾಮಣ್ಣನವರ ಬಿಲ್ಡಿಂಗ್ ಮುಂಭಾಗ ಮಲವಿಸರ್ಜನೆ(ಕಕ್ಕಸ್ಸು )ಗುಂಡಿ ಓಪನ್ ಆಗಿದ್ದು, ಅದರ ಪಕ್ಕದಲ್ಲೇ ಕುಡಿಯುವ ನೀರಿನ ವಾಲ್ವ್ ಇದ್ದು,ಈ ವಾಲ್ವ್ ಪೈಪುಗಳ ಮುಖಾಂತರ ಜೋಗಿಮಟ್ಟಿ ರಸ್ತೆಯ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಗಳಿವೆ,
ಯುಜಿಡಿ ಗುಂಡಿಯ ಮಲ ಮಿಶ್ರಿತ ವಿಷಪೂರಿತ ನೀರು ಕುಡಿಯುವ ನೀರಿಗೆ ಮಿಶ್ರಿತವಾಗಿ ಪೈಪುಗಳಲ್ಲಿ ಸಂಚರಿಸುತ್ತಿದೆ,
ಈ ಜಾಗದಲ್ಲಿ ಪಾದಚಾರಿಗಳು, ವಾಹನಗಳು, ಸ್ಥಳೀಯ ರಾಜಕಾರಣಿಗಳು, ಎಡೆಬಿಡದೆ ಅಡ್ಡಾಡುತ್ತಿದ್ದಾರೆ, ಆದರೂ ಕೂಡ ಯಾರಿಗೂ ಗೊತ್ತಿಲ್ಲದಂತೆ ಗಮನಕ್ಕೆ ಬಾರದೆ ಇದ್ದಂತೆ ಇದ್ದಾರೆ, ಈಗಾಗಲೇ ಚಿತ್ರದುರ್ಗದಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಹರಡಿದ್ದು , ಇದನ್ನು ಬೇಗ ಸರಿಪಡಿಸದಿದ್ದರೆ, ನಗರದಲ್ಲಿ ನಾಗರಿಕರಿಗೆ ಆರೋಗ್ಯದ ಗಂಡಾಂತರ ಹೆದ ರಿಸಬೇಕಾಗುತ್ತುದೆ, ಇದನ್ನು ಬೇಗ ಸ್ಥಳೀಯ ರಾಜಕಾರಣಿಗಳು ಶಾಸಕರ ಗಮನಕ್ಕೆ ತಂದು, ನಗರಸಭೆಯಿಂದ ಸರಿಪಡಿಸದಿದ್ದರೆ ನಡೆಯುವ ಅಹಿತಕರ ಘಟನೆಗಳಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ, ನಮ್ಮ ನಿತ್ಯ ವಾಣಿ ದಿನಪತ್ರಿಕೆಗೆ ಜೋಗಿಮಟ್ಟಿ ರಸ್ತೆಯ ಸಮಾಜ ಸೇವಕರಾದ ಜಿ ಗಿರೀಶ್ ರವರು ಈ ಒಂದು ದೃಶ್ಯವನ್ನು ಕಂಡು ನಮ್ಮ ಪತ್ರಿಕೆಗೆ ತಿಳಿಸಿದಾಗ ನಮ್ಮ ವರದಿಗಾರರು ಆ ಸ್ಥಳಕ್ಕೆ ಭೇಟಿಕೊಟ್ಟು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ವರದಿ ಮಾಡಿದೆ, ಬೇಗ ರಾಜಕಾರಣಿಗಳಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇದನ್ನು ಸರಿಪಡಿಸದಿದ್ದರೆ ನಮ್ಮ ನಿತ್ಯ ವಾಣಿ ದಿನಪತ್ರಿಕೆ ಮುಂದಿನ ಕ್ರಮಕ್ಕೆ ಎಚ್ಚರಿಸಿದೆ