ಯೂಟ್ಯೂಬ್​ನಲ್ಲಿ ಹೊಸ ದಾಖಲೆ ಬರೆದ ಡಿಯರ್​ ಕಾಮ್ರೆಡ್​

ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ ಡಿಯರ್​ ಕಾಮ್ರೆಡ್​ ಸಿನಿಮಾ ದಕ್ಷಿಣದ ಹಲವು ಭಾಷೆಗಳಲ್ಲಿ ತೆರೆಕಂಡಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿತ್ತು. ಜತೆಗೆ ಬಾಲಿವುಡ್​ನಲ್ಲಿ ರಿಮೇಕ್​ ಆಗಲಿದೆ ಎಂಬ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡಿತ್ತು. ಕೆಲ ತಿಂಗಳ ಹಿಂದೆ ಹಿಂದಿಗೆ ಡಬ್​ ಆಗಿ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಿತ್ತು ಈ ಸಿನಿಮಾ. ಇದೀಗ ಹಾಗೇ ಅಪ್​ಲೋಡ್​ ಆಗಿದ್ದೇ ತಡ ಹೊಸ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ.ಹೌದು, ಹಿಂದಿಗೆ ಡಬ್​ ಆಗುವ ದಕ್ಷಿಣ ಭಾರತದ ಸಿನಿಮಾಗಳಿಗೆ ಯೂಟ್ಯೂಬ್​ನಲ್ಲಿ ದೊಡ್ಡ ಬೇಡಿಕೆ ಇದೆ. ಬಾಲಿವುಡ್​ ಸಿನಿಮಾಗಳಿಗಿಂತ ಸೌತ್​ ಸಿನಿಮಾಗಳನ್ನೇ ಉತ್ತರ ಪ್ರೇಕ್ಷಕರು ಹೆಚ್ಚು ಇಷ್ಟ ಪಡುತ್ತಾರೆ. ಈಗಾಗಲೇ ಅದು ಸಾಕಷ್ಟು ಸಲ ಸಾಬೀತಾಗಿದೆ. ಇದೀಗ ಡಿಯರ್​ ಕಾಮ್ರೆಡ್ ಸಿನಿಮಾ ಇಲ್ಲಿಯವರೆಗೂ ಬೇರಾವ ಭಾರತೀಯ ಸಿನಿಮಾ ಮಾಡದ ದಾಖಲೆಯೊಂದನ್ನು ಮಾಡಿದೆ. ಒಟ್ಟು 2 ಮಿಲಿಯನ್​ಗೂ ಅಧಿಕ ಲೈಕ್​ ಗಿಟ್ಟಿಸಿಕೊಂಡ ಮೊದಲ ಸ್ಥಾನದಲ್ಲಿದೆ. ಒಟ್ಟು 167 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.ಇನ್ನು ಇದರ ಖ್ಯಾತಿ ನೋಡಿಯೇ ಚಿತ್ರದ ರಿಮೇಕ್​ ಹಕ್ಕುಗಳನ್ನು ಕರಣ್​ ಜೋಹರ್ ಪಡೆದುಕೊಂಡಿದ್ದರು. ಧರ್ಮ ಪ್ರೊಡಕ್ಷನ್​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಕಾರ್ತಿಕ್​ ಆರ್ಯನ್​ ನಾಯಕನಾಗಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published.