ನಿತ್ಯವಾಣಿ, ಚಿತ್ರದುರ್ಗ, (ಏ.12): ಆತ್ಮೀಯ ಸ್ನೇಹಿತ, ಚಿತ್ರದುರ್ಗ ದ ಪಬ್ಲಿಕ್ TV ಕ್ಯಾಮೆರಾಮನ್ ಬಸವರಾಜ ಕೋಟಿ ಅವರು ಕೋವಿಡ್ ಗೆ ಬಲಿಯಾಗಿದ್ದಾರೆ.
ಕಳೆದ 10 ದಿನಗಳಿಂದ ಚಿತ್ರದುರ್ಗ ಜಿಲ್ಲಾಆಸ್ಪತ್ರೆ ಯಲ್ಲಿ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ದುರ್ಗದ ಆತ್ಮೀಯ ಸ್ನೇಹಿತರೊಬ್ಬರನ್ನು ಕಳೆದುಕೊಂಡಿದ್ದು, ನಿಜಕ್ಕೂ ನೋವು ತಂದಿದೆ.
ಮಾಧ್ಯಮ ಸ್ನೇಹಿತರು ಕೆಲಸದ ಒತ್ತಡ ಹಾಗೂ ಸುದ್ದಿ, ಫೋಟೋ, ಅಥವಾ ವಿಡಿಯೋ ಪಡೆಯುವ ಧಾವಂತದಲ್ಲಿ ವಯಕ್ತಿಕ ಎಚ್ಚರಿಕೆ ಮರೆಯುವುದು ಸರಿಯಲ್ಲ. ನಿಮ್ಮನ್ನು ನಂಬಿಕೊಂಡು ಕುಟುಂಬವೊಂದು ಇದೆ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂಬುದು ನಿತ್ಯವಾಣಿ ಯಿಂದ ಪ್ರಾರ್ಥನೆ.