ಹಿರಿಯ ಪತ್ರಕರ್ತ ಅಂಜಿನಪ್ಪ ಇನ್ನಿಲ್ಲ

ನಿತ್ಯವಾಣಿ, ಚಿತ್ರದುರ್ಗ, ಜೂ.04 : 2022-25 ನೇ ಸಾಲಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಾಗಿದ್ದ ಅಂಜಿನಪ್ಪ ಚಿತ್ರದುರ್ಗ ಜೋಗಿಮಟ್ಟಿ ರಸ್ತೆಯ ಅವರ ನಿವಾಸದಲ್ಲಿ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ,  ಇವರು ಹಿರಿಯ ಪತ್ರಕರ್ತರಾಗಿದ್ದು ಅನೇಕ ಪತ್ರಿಕೆಗಳಿಗೆ ಪೇಜ್ ಮಾಡಿ ಕೊಡುವ ಪೇಜಿನೇಟರ್ ಪತ್ರಿಕಾ ಕ್ಷೇತ್ರ ವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು ಇಂತಹ ಸಂಭಾವಿತ ವ್ಯಕ್ತಿ
ಬಹಳ ಆಸೆಯಿಂದ ಸಂಘದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಯಾಗಿದ್ದರು..
ಅವರ ಸ್ವಂತ ಕಟ್ಟಡ ದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಅವರದೇ ಸಂಪಾದಕೀಯದಲ್ಲಿ ಹೊರಬರುತ್ತಿದ್ದ *ಸುದ್ದಿ ಸರದಾರ ಪತ್ರಿಕೆಗೆ* ಸ್ವಂತ ಪತ್ರಿಕೆ ಆರಂಭಿಸಿ ಚಂದವಾಗಿ ನಡಸಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದ್ದ ಸರಳ ಜೀವಿ. ಜೊತೆಗೆ ಅನೇಕ ಪತ್ರಿಕೆ ಗಳಿಗೆ ಸುಂದರವಾಗಿ ಪೇಜ್ ಮಾಡಿ ಕೊಡುವ ತ್ರಾಂತ್ರಿಕ ಪರಿಣಿತ
ಇವರ ಅಗಲಿಕೆ  ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾಗದ ನಷ್ಟ ಅಗಿದೆ ಎಂದು ಚಿತ್ರದುರ್ಗ ಜಿಲ್ಲಾ ಪತ್ರಿಕಾ ಬಳಗ ದುಃಖ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.