ಸಂತೋಷ ಕೂಟಕ್ಕೆ ಹೊರಟವರು ಮಸಣ ಸೇರಿದರು! ಭೀಕರ ಅಪಘಾತದಲ್ಲಿ 9 ಮಂದಿ ಮಹಿಳೆಯರು ಸೇರಿ 11 ಸಾವು
ಧಾರವಾಡ: ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗೋವಾದಲ್ಲಿ ಸಂತೋಷ ಕೂಟ ಆಚರಿಸಲೆಂದು ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಟೆಂಪೊ ಟ್ರಾವೆಲರ್ ತಾಲೂಕಿನ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದು ಒಂಬತ್ತು ಮಂದಿ ಮಹಿಳೆಯರು ಸೇರಿದಂತೆ 11 ಜನ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಹುಬ್ಬಳ್ಳಿ- ಧಾರವಾಡ ಬೈಪಾಸ್ ನ ಇಟಿಗಟ್ಟಿ ಗ್ರಾಮದ ಸಮೀಪ ನಡೆದ ಈ ಅಪಘಾತದಲ್ಲಿ ಟೆಂಪೋ ಟ್ರಾವೆಲರ್ ಚಾಲಕ ಮತ್ತು ಟಿಪ್ಪರ್ ಲಾರಿ ಚಾಲಕ ಹಾಗೂ ಇನ್ನುಳಿದಂತೆ 9 ಮಂದಿ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ವೈದ್ಯರಿದ್ದಾರೆ ಎನ್ನಲಾಗಿದೆ.
ಮೃತಪಟ್ಟವರನ್ನು
ಮಾಜಿ ಶಾಸಕ ಸೊಸೆ ಸೇರಿ 11 ಜನ ದುರ್ಮರಣ, ಮಾಜಿ ಶಾಸಕ ಸಿದ್ದನಗೌಡ ಸೊಸೆ ಡಾಕ್ಟರ್ ವೀಣಾ ಪ್ರಕಾಶ್
ಪ್ರವೀಣ್, ಆಶಾ, ಮೀರಾಬಾಯಿ, ಪರಂಜ್ಯೋತಿ, ರಾಜೇಶ್ವರಿ, ಶಕುಂತಲಾ, ಉಷಾ, ವೇದಾ, , ಮಂಜುಳ, ನಿರ್ಮಲ, ರಜನೀಶಿ, ಪ್ರೀತಿ, ಸ್ವಾತಿ ಎಂದು ಗುರುತಿಸಲಾಗಿದೆ. ಚಾಲಕನ ಹೆಸರು ತಿಳಿದು ಬಂದಿಲ್ಲ.