ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕು ಕೊಮ್ಮನಪಟ್ಟಿ ಸಮೀಪ NH 150 ಚತುಷ್ಪಥ ರಸ್ತೆಯಲ್ಲಿ ಬಳ್ಳಾರಿ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ KA – 01 MJ – 1442 ಮಾರುತಿ ಸುಜುಕಿ ಕಾರ್ ಹಾಗೂ ಚಿತ್ರದುರ್ಗ ದಿಂದ ಬಳ್ಳಾರಿ ಗೆ ಹೋಗುತ್ತಿದ್ದ KA – 53 M – 4849 ನೇ ಹುಂಡಯ್ ಕಾರು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ವಾಗಿದ್ದು
ಸ್ಥಳದಲ್ಲಿಯೇ ಇಬ್ಬರು ಮೃತ ಪಟ್ಟು ಎಂಟು ಮಂದಿ
ಗಂಭೀರ ವಾಗಿ ಗಾಯಗೊಂಡಿದ್ದಾರೆ, ಬಳ್ಳಾರಿಯ ಮಾರಮ್ಮನ ದೇವಿ ದರ್ಶನಕ್ಕೆಂದು ಕುಟುಂಬ ಸಮೇತ ತೆರಳಿದ್ದ ಚಿತ್ರದುರ್ಗದ ಕಾರು ಹಾಗೂ ಶ್ರೀಶೈಲದಿಂದ ಬೆಂಗಳೂರಿನ ಕಡೆ ತೆರಳುತ್ತಿದ್ದ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ವನಜಾಕ್ಷಿ ಗಂಡ ಧನರಾಜ (36) ಹಾಗೂ ಚಿತ್ರದುರ್ಗದ ಮಹೇಂದ್ರ (SBLಮಾಯಣ್ಣ )ತಂದೆ ಮಹದೇವಪ್ಪ (50)ವರ್ಷ ಮೃತರು. ಮೃತ SBL ಮಾಯಣ್ಣ/ ಮಹೇಶ್ ಚಿತ್ರದುರ್ಗದವರು.
ಧನರಾಜ್, ಸಮೃದ್ದಿ, ವರ್ಷ, ಧನ್ಯಶ್ರೀ, ಮೃತ್ಯುಂಜಯ, ಭರತ್, ಪಾರ್ವತಮ್ಮ, ಭೂಮಿಕ, ಉಮಾ ಗಾಯಗೊಂಡವರು. ಮೊಳಕಾಲ್ಮುರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.