ನಿಗೂಢ ಸಾವು…..?

ಮೈಸೂರು ವಿಶ್ವ ವಿದ್ಯಾಲಯದ ಫೈನ್ ಆಟ್ರ್ಸ್ ಕಾಲೇಜಿನ ಮಹಿಳಾ ನೌಕರರೊಬ್ಬರ ಮೃತ ದೇಹ ಅವರ ಮನೆಯಲ್ಲೇ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸರಸ್ವತಿ ಪುರಂನ ಅಂಚೆ ಕಚೇರಿ ಸಮೀಪದ ಮನೆಯೊಂದರಲ್ಲಿ ಮಾಯಾ ದೇವಿ (55) ಎಂಬುವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮಾಯಾದೇವಿ ಅವರು ಫೈನ್ ಆಟ್ರ್ಸ್ ಕಾಲೇಜಿನಲ್ಲಿ ಸೂಪರಿಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು , ಸರಸ್ವತಿ ಪುರಂನ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಸಂಬಂಧಿಕರು ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಸ್ವೀಕರಿಸದೆ ಇದ್ದಾಗ ಅನುಮಾನ ಬಂದು ಮನೆ ಹತ್ತಿರ ಬಂದು ನೋಡಿದಾಗ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಮನೆಯ ಮುಂಭಾಗ ಹಾಲು, ಪೇಪರ್ ಕಳೆದ ಮೂರ್ನಾಲ್ಕು ದಿನಗಳಿಂದ ಹಾಗೆಯೇ ಬಿದ್ದಿದ್ದು , ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸರಸ್ವತಿ ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published.