ಔರಂಗಾಬಾದ್ : ಕಳೆದ ಎರಡು ವಾರಗಳ ಹಿಂದೆಯಷ್ಟೆ ಪಾಕ್ ಜೈಲಿನಿಂದ ಮುಕ್ತಿ ಹೊಂದಿ ತವರು ನೆಲ ಭಾರತಕ್ಕೆ ಮರಳಿದ್ದ ಹಸೀನಾ ಬೇಗಂ ಇಂದು (ಫೆ.10 ಬುಧವಾರ) ಇಹಲೋಕ ತೈಜಿಸಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿ ಹಸೀನಾ ಬೇಗಂ, 18 ವರ್ಷಗಳ ಹಿಂದೆ ತನ್ನ ಗಂಡ ಹಾಗೂ ಸಂಬಂಧಿಕರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದರು. ಆದರೆ, ಪಾಸ್ ಪೋರ್ಟ್ ಕಳೆದುಕೊಂಡ ಪರಿಣಾಮ ಅಲ್ಲಿಯ ಜೈಲು ಸೇರಬೇಕಾಯಿತು.
ಕಳೆದ ವರ್ಷ ಪಾಕ್ ನ್ಯಾಯಾಲಯಕ್ಕೆ ಹಸೀನಾ ಅರ್ಜಿ ಸಲ್ಲಿಸಿ, ತನ್ನ ಪೂರ್ವಾಪರದ ಬಗ್ಗೆ ಹೇಳಿಕೊಂಡಿದ್ದರು. ಈ ಅರ್ಜಿಯನ್ನು ಆಧರಿಸಿ ಅಲ್ಲಿಯ ನ್ಯಾಯಾಲಯ ಭಾರತಕ್ಕೆ ಪತ್ರ ಬರೆದು ಹಸೀನಾ ಕುರಿತು ಮಾಹಿತಿ ಪಡೆದುಕೊಂಡಿತ್ತು. ಭಾರತದಿಂದ ನಿಖರ ಮಾಹಿತಿ ಸಿಕ್ಕ ಹಿನ್ನೆಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.ಕಳೆದ ಜನವರಿ 26 ರಂದು ಪಾಕ್ ಜೈಲಿನಿಂದ ಮುಕ್ತಿ ಹೊಂದಿದ್ದ ಹಸೀನಾ ಭಾರತಕ್ಕೆ ಮರಳಿದ್ದರು. ಆದರೆ, ಇಂದು ಹೃದಯಾಘಾತದಿಂದ ಮರಣ ಹೊಂದಿದ್ದಾರೆ.