ಚಿತ್ರದುರ್ಗ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ವಕೀಲರ ಆಕ್ರೋಶ,

ನಿತ್ಯವಾಣಿ, ಚಿತ್ರದುರ್ಗ, (ಮೇ. 16): ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವಕೀಲರಾದ ಹನುಮಂತರಾಜು ಅವರ ಆಕ್ರಂದನದ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ ವಿಡಿಯೋದಲ್ಲಿ ಕಾಣಬರುತ್ತಿರುವ ದೃಶ್ಯದಲ್ಲಿ ಅವರ ಬೆಡ್ಡಿನ ಅಕ್ಕ ಪಕ್ಕ 3 ಜನ ಸತ್ತು ಹೋಗಿರುವುದು ಕಾಣುತ್ತದೆ,      o    ವಕೀಲರು ವೈದ್ಯರು ಯಾರು ಬಂದು ಇದನ್ನು ನೋಡದಿರುವುದು ನಾವು ಕಂಗಾಲಾಗಿದ್ದೇವೇ, ನನಗೆ ಕೋವಿಡ್ ಬಂದಿದ್ದು ಚಿಕಿತ್ಸೆ ಪಡೆಯಲು ಎಂಟು ದಿನ ಆಗಿದೆ, ಆದರೆ ಇಲ್ಲಿ ಯಾವುದೇ ವ್ಯವಸ್ಥೆ ಚಿಕಿತ್ಸೆ ಪಡೆಯಲು ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಶ್ರೀರಾಮುಲು, ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ, ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಎಲ್ಲಿದಿರಾ ನೀವೆಲ್ಲ ಇದಕ್ಕೆಲ್ಲ ನೀವೇ ಕಾರಣರಾಗುತ್ತೀರಿ ಎಂದು ಇವರ ಜೊತೆ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ದೆಯು ಕೂಡಅಳಲು ತೋಡಿಕೊಂಡಿದ್ದಾರೆ, ನಮ್ಮ ನಿತ್ಯ ವಾಣಿ ಪತ್ರಿಕೆಯು ಇದನ್ನು ನೋಡಿ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಅನಿಲ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ಮಾತನಾಡುತ್ತಾ ನಾನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಇದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಖುದ್ದಾಗಿ ಭೇಟಿ ನೀಡಿ ಮುಂದಿನ ಸರಿಯಾದ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ನಮಗೆ ತಿಳಿಸಿದರು, ಹಾಗೂ ಇದನ್ನು ಸರಿಪಡಿಸದಿದ್ದರೆ ವಕೀಲರ ಸಂಘ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ವಕೀಲರಾದ ಅಶೋಕ್ ಕುಮಾರ್ ನಮ್ಮ ಪತ್ರಿಕೆಯ ಸಂಪಾದಕರು ದೂರವಾಣಿ ಮುಖಾಂತರ ಅವರನ್ನು ಸಂಪರ್ಕಿಸಿದಾಗ ಅವರು ಕೂಡ ಮಾತನಾಡುತ್ತಾ ಇದು ಖಂಡನೀಯ ವಕೀಲರ ಈ ಪಾಡು ಆದರೆ ಸಾರ್ವಜನಿಕರ ಗತಿಯೇನು ಎಂದು ಇದನ್ನು ಸರಿಪಡಿಸಲು ಜಿಲ್ಲಾಡಳಿತಕ್ಕೆ ಮನವಿ ಯನ್ನು ಕೋರಿದರು, ನಮ್ಮ ನಿತ್ಯ ವಾಣಿ ಪತ್ರಿಕೆಯು ಕೂಡ ಇದನ್ನು ಮನಗಂಡು ಇದಕ್ಕೆ ಸಂಬಂಧಪಟ್ಟವರು ಬೇಗ ಸರಿಪಡಿಸಿ ಕೊಡಲು ಎಚ್ಚರಿಸಿದೆ

Leave a Reply

Your email address will not be published.