ದಂಪತಿಗಳು ಸ್ಥಳದಲ್ಲೇ ಸಾವು

 ದಂಪತಿ ಪ್ರಯಾಣಿಸುತ್ತಿದ್ದ ದ್ವಿಚಕ್ರವಾಹನ ಎತ್ತಿನಬಂಡಿಯ ಮುಂಭಾಗದ ಕಬ್ಬಿಣದ ಸಲಾಕೆಗೆ ತಾಗಿ ಸಲಾಕೆ ಅವರ ಎದೆ ಭಾಗವನ್ನು ಹೊಕ್ಕ ಕಾರಣ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಟ್ಟೂರು ತಾಲೂಕಿನ ಬೆನಕನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಇಬ್ಬರ ಶವಸಂಸ್ಕಾರವನ್ನು ಹೊಸಕೇರಿಯಲ್ಲಿಯೇ ನೆರವೇರಿಸಲಾಯಿತು.

ಮೃತರು ಸಂಡೂರುನ ಕೆ. ಶಿವಕುಮಾರ್ (32) ಮತ್ತು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮದ ಎಸ್.ಎಂ. ನಿವೇದಿತಾ (30). 10 ವರ್ಷಗಳ ಹಿಂದೆ ಇವರ ವಿವಾಹ ನಡೆದಿದ್ದು, ಕೆ. ಶಿವಕುಮಾರ್ ಗಣಿ ಕಂಪನಿಯಲ್ಲಿ ವಾಹನ ಚಾಲಕನಾಗಿ, ನಿವೇದಿತಾ ಬಿಎಡ್ ವಿದ್ಯಾರ್ಥಿಯಾಗಿದ್ದರು.

ಪೊಲೀಸರ ಪ್ರಕಾರ, ದಂಪತಿ ನಸುಕಿನಲ್ಲಿ ಸಂಡೂರುನತ್ತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ದಟ್ಟವಾಗಿ ಮುಸುಕಿದ ಮಂಜಿನಿoದಾಗಿ ಎದುರಲ್ಲಿದ್ದ ಎತ್ತಿನ ಗಾಡಿಯನ್ನು ಗುರುತಿಸುವಲ್ಲಿ ಚಾಲಕನು ವಿಫಲನಾಗಿ ನೇರವಾಗಿ ಡಿ ಕ್ಕಿ ಹೊಡೆದ ಕಾರಣ ಗಾಡಿಯ ಮುಂಬಾಗದ ಕಬ್ಬಿಣದ ಸಲಕೆ (ಮೋಕು) ಇಬ್ಬರ ಎದೆ ಗೂಡನ್ನು ಹೊಕ್ಕ ಕಾರಣ ತೀವ್ರವಾಗಿ ರಕ್ತಸ್ರಾವ ಉಂಟಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಜಗಳೂರು ತಾಲೂಕಿನ ಹೊಸಕೇರಿಯಲ್ಲಿ ನೆರವೇರಿಸಲು ಸಂಬoಧಿಕರು ನಿರ್ಧರಿಸಿದ್ದಾರೆ. ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪೋಸ್ಟ್ಮಾರ್ಟ್ಂ ನಡೆಸಿ, ಪೋಷಕರಿಗೆ ಶವಗಳನ್ನು ಹಸ್ತಾಂತರಿಸಿದ್ದಾರೆ.

Leave a Reply

Your email address will not be published.