ನಿತ್ಯ ವಾಣಿ,ಚಿತ್ರದುರ್ಗ,(ಜೂ,23) : ಮೂರನೇ ಅಲೆ ಕೋವಿಡ್ ಗಿಂತಲೂ ಡೆಲ್ಟಾ ಪ್ಲಸ್ ವೈರಸ್ ಘೋರ ವಾಗಿರುತ್ತೆ, ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ, ಗ್ಯಾಂಗ್ರಿನ್ ಆಗುವ ಸಂಭವವಿದೆ, ಸುಮಾರು ಒಂಬತ್ತು ವಿದೇಶಗಳಲ್ಲಿ ತುಂಬಾ ಆವರಿಸಿ ಈಗ ಭಾರತ ದೇಶಕ್ಕೆ ಕಾಲಿಟ್ಟಿದ್ದು, ಕರ್ನಾಟಕದ ಅಕ್ಕಪಕ್ಕ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ರೋಗ ಪ್ರಾರಂಭವಾಗಿದೆ, ಈಗಾಗಲೇ ಮಹಾರಾಷ್ಟ್ರದಲ್ಲಿ ಯಥೇಚ್ಛವಾಗಿ ಹರಡುತ್ತಿರುವ ಈ ರೋಗ ಮಾರಾಷ್ಟ್ರ ಕೇರಳದಲ್ಲಿ 120 ದಿನದಲ್ಲಿ ಸೂಪರ್ ಸ್ಪೀಡ್ ಆಗುವ ಸೂಚನೆ ಇದೆ,ಈ ಮೂರನೆಯ ಅಲೆಯ ಸೋಂಕು ಮಕ್ಕಳಲ್ಲಿ ಫಾಸ್ಟ್ ಆವರಿಸುವ ಸಂಭವವಿದೆ, ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯಾಗಿ ತಯಾರಾಗ ಬೇಕಾಗಿದೆ ಇಲ್ಲದಿದ್ದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗುತ್ತದೆ, ನಾಗರೀಕರು ಕೂಡ ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ ಇಲ್ಲದಿದ್ದಲ್ಲಿ ತುಂಬಾ ಕಷ್ಟಕರ ಆಗಬಹುದು ಎಚ್ಚರಿಕೆ ಎಂದು ವೈದ್ಯರುಗಳ ಸಂಘಗಳು ಮುನ್ಸೂಚನೆ ಕೊಟ್ಟಿವೆ,