ಅಯ್ಯೋ ವಿಧೀ ಆಟವೆ ನಿನಗೆ ಕರುಣೆ ಇಲ್ಲವೆ : ರಾಜ್ ಟಿವಿ ಕ್ಯಾಮೆರಾಮ್ಯಾನ್ ವಿನಯ್ ನಿಧನ

ಚಿತ್ರದುರ್ಗ: ಡಿ.09: ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ, ಪ್ರಸ್ತುತ ರಾಜ್ ಟಿವಿ ಕ್ಯಾಮೆರಾ ಮ್ಯಾನ್ ಆಗಿದ್ದ ವಿನಯ್ (34) ಉಸಿರಾಟದ ತೊಂದರೆಯಿಂದ ನಿಧನರಾದರು.ಕಳೆದ ನವೆಂಬರ್ 29 ರಂದು ವಿವಾಹವಾಗಿದ್ದ ವಿನಯ್ (ಬ್ಲ್ಯಾಕಿ )ಅನ್ನೇಹಾಳ್ ಗ್ರಾಮದವರು. ಚಿತ್ರದುರ್ಗದ ದವಳಗಿರಿ ಬಡವಾಣೆಯಲ್ಲಿ ವಾಸವಾಗಿದ್ದರು.ಪ್ರಸ್ತುತ ರಾಜ್ ಟಿವಿ ಕ್ಯಾಮೆರಾ ಮ್ಯಾನ್ ಆಗಿ ಕಾರ್ಯನಿರ್ವ ಹಿಸುತ್ತಿದ್ದರು. ಈ ಹಿಂದೆ ಉದಯ ಟಿ.ವಿ, ಚಿತ್ರದುರ್ಗ ಸಿಟಿ ಕೇಬಲ್ , ಕ್ಯಾಮರಾ ಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು.ಮದುವೆಯಾಗಿ ಬರೀ ಹತ್ತು ದಿನ ಕಳೆದಿತ್ತು ಅವರು  ಡಿ. 09 ಇಂದು ಬೆಳಗಿನ ಜಾವ ವಿನಯ್ ನಿಧನರಾದರು.  ತೀವ್ರ ಉಸಿರಾಟದ ತೊಂದರೆ ಕಾರಣ ರಾತ್ರಿ ನಗರದ ಶ್ಬ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಗಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಗೆ ತಡರಾತ್ರಿ ಒಂದುಗಂಟೆಗೆ ಕಳುಹಿಸಲಾಗಿತ್ತು.ಇನ್ನೂ ದಾಂಪತ್ಯ ಜೀವನದ ಕನಸು ಹೊತ್ತು ಬಾಳಸಂಗಾತಿಯಾಗಿ ಕೈಹಿಡಿದಿದ್ದ ಆ ಹೆಣ್ಣಿನ ಜೀವನ ಕಣ್ಣಿರಲ್ಲಿದೆ. ವಿನಯ್ ನಿಧನಕ್ಕೆ ಚಿತ್ರದುರ್ಗ ಜಿಲ್ಲೆಯ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.ಇಂದು ಮಧ್ಯಾನ್ಹ ದೊಳಗೆ ಸ್ವಗ್ರಾಮ ಅನ್ನೇಹಾಳ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ವಿನಯ್ ಅವರ ಪಾರ್ಥಿವ ಶರೀರ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿ ರಸ್ತೆ ಸಾಮಾಜಿಕ ಅರಣ್ಯ ವಲಯ ಕಛೇರಿ ಹಿಂಬಾಗದ ದವಳಗಿರಿ ಬಡಾವಣೆ ಅವರ ಸ್ವ ಗೃಹಕ್ಕೆ 9:30ಕ್ಕೆ ಬರಲಿದೆ ಅಲ್ಲಿ ಸುಮಾರು 10 ಗಂಟೆಯ ವರೆಗೆ
ಅಂತಿ ದರ್ಶನಕ್ಕೆ ಅವಕಾಶ ವಿರುತ್ತದೆ ನಂತರ ಅವರ ಪಾರ್ಥಿವ ಶರೀರವನ್ನು ಅವರ ಸ್ವ ಗ್ರಾಮವಾದ ಅನ್ನೇಹಾಳ್ ಗೆ ಕೊಂಡೊಯ್ಯಲಾಗುವುದು ಅಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ …

Leave a Reply

Your email address will not be published.