ನಿತ್ಯವಾಣಿ.ಚಿತ್ರದುರ್ಗ, ( ಜು. 3) : ಋತ ಚಕ್ರದ ವೇಳೆ ವೈಯುಕ್ತಿಕ ಶುಚಿತ್ಚ ಕಾಪಾಡಿಕೊಳ್ಳದೆ ಹೋದರೆ ಅಪಾಯಕಾರಿಯಂತಹ ರೋಗಕ್ಕೆ ತುತ್ತಾಗುವ ಎಲ್ಲ ಅವಕಾಶಗಳಿರುತ್ತವೆ. ಆದ್ದರಿಂದ ಋತುಚಕ್ರದ ಸಮಯದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸ್ತ್ರೀ ರೋಗ ತಜ್ಞ ಡಾ. ರವಿಕುಮಾರ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಒeಟಿsಣಡಿuಚಿಟ ಊಥಿgieಟಿe ಆಚಿಥಿ ಅಂಗವಾಗಿ ಗ್ರಾಮ ಪಂಚಾಯಿತಿಯ ಮಹಿಳಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಜಿಲ್ಲಾ ಪಂಚಾಯಿತಿ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳಿಗೆ ಎಲ್ಲ ಹಂತದ ಸಿಬ್ಬಂದಿಗಳಿಗೆ ಋತುಚಕ್ರದ ಕುರಿತು ವೈಜ್ಞಾನಿಕ ನಿರ್ವಹಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಜ.ಪಂ.ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲಾ ಮಟ್ಟದಲ್ಲಿ ಋತುಚಕ್ರದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾನ್ಯವಾಗಿ ತಿಂಗಳಿಗೊಮ್ಮೆ ಋತುಚಕ್ರದ ಸಮಯವಾಗಿರುತ್ತದೆ. ಅದ್ದರಿಂದ ಒಂದೆರಡು ದಿನಗಳು ಏರುಪೇರಾದರೆ ಯಾರೂ ಭಯಪಡುವ ಅಗತ್ಯವಿಲ್ಲ. ಋತು ಚಕ್ರದ ಸಮಯದಲ್ಲಿ ಸಂಕೋಚಪಡುವುದು, ಮನೆಯಿಂದ ಹೊರಗಿಬಾರದು, ಇದೊಂದು ಸ್ವಾಭಾವಿಕ ಕ್ರಿಯೆಯಾಗಿದೆ ಎಂದ ಅವರು ಇಂತಹ ಋತು ಚಕ್ರದ ಬಗ್ಗೆ ಎಲ್ಲರೂ ಯಾವುದೆ ಸಂಕೋಚವಿಲ್ಲದೆ ಮುಕ್ತವಾಗಿ ಮಾತನಾಡುವಂತಾಗಬೇಕು ಎಂದರು.
ಋತು ಚಕ್ರದ ಸಮಯದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ರಕ್ತಸ್ರಾವ ಅದರೆ ಅದು ಸಹಜ ಪ್ರತಿಕ್ರಿಯೆಯಾಗಿದೆ. ಆದರೆ ನಾಲ್ಕರಿಂದ ಎಂಟು ಹತ್ತು ದಿನಗಳ ಕಾಲ ರಕ್ತಸ್ರಾವ ಆದರೆ ಅದು ಅಸಹಜ ಕ್ರಿಯೆಯಾಗಿರುತ್ತದೆ. ಮೊಟ್ಟ ಮೊದಲು ಋತುಚಕ್ರದ ಸಮಯದಲ್ಲಿ ಮಕ್ಕಳಲ್ಲಿ ಮುಜುಗರ ಸಂಕೋಚ ಭಯ ಕೂಡ ಇರುತ್ತದೆ.
ಆದ್ದರಿಂದ ಮಕ್ಕಳಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡಬೇಕು.ಇನ್ನು ಋತು ಚಕ್ರದ ವೇಳೆ ಸ್ಯಾನಿಟರಿ ನ್ಯಾಪ್ಕಿನ್ಸ್‌ಗಳನ್ನು ೧೦ ರಿಂದ ೧೫ ಬಳಸಲಾಗುತ್ತದೆ. ಸ್ಯಾನಿಟರಿ ಪ್ಯಾಡ್ ಹಾಗೂ ಟಾಂಪೂನ್ಸ್‌ಗಳ ಬಳಕೆಯೂ ಒಂದು ಒಳ್ಳೆಯ ಮೆಥೆಡ್ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ಡಾ.ನಂದಿನಿದೇವಿ, ಸಿಪಿಓ ಗಾಯತ್ರಿ, ಎಪಿ೨ ಸುಮಾ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರು ಶ್ರೀಮತಿ ಪ್ರಮೀಳಾ ಸೇರಿದಂತೆ ಇತರರು ಭಾಗವಹಿಸಿದ್ದರು.