ಆಸ್ತಿಯನ್ನ ನಾಯಿ ಹೆಸರಿಗೆ ಬರೆದ ಯಜಮಾನ

ಮನುಷ್ಯನಿಗಿಂತ ನಿಯತ್ತಿನ ಪ್ರಾಣಿ ಎಂದರೆ ಅದು ನಾಯಿ. ತನ್ನ ಯಜಮಾನನ್ನ ಒಂದು ಬಾರಿ ನಂಬಿದ್ರೆ ಸಾಕು ಜೀ’ವಂತ ಇರುವವರೆಗೂ ಅವನನ್ನ ಕಾಯುತ್ತೆ. ಯಾವುದೊ ಒಂದು ವಿಧದಲ್ಲಿ ಸೇವೆ ಸಲ್ಲಿಸುತ್ತೆ ಮಾತು ಬಾರದ ನಾಯಿ. ಹಾಗಾಗಿಯೇ ಇಲ್ಲೊಬ್ಬ ವ್ಯಕ್ತಿ ತನ್ನ ಆಸ್ತಿಯೆನ್ನ ಸಾಕು ನಾಯಿಯ ಹೆಸರಿಗೆ ಬರೆದಿರುವ ಅಚ್ಚರಿಯ ಪ್ರಸಂಗವೊಂದು ನಡೆದಿದೆ. ಈಗಂತೂ ಹೆತ್ತ ತಂದೆ ತಾಯಿಗಳಿಗೂ ತುತ್ತು ಅನ್ನ ಹಾಕಲಿಕ್ಕೆ ಕಷ್ಟ ಎನ್ನುವ ಮಕ್ಕಳೇ ಹೆಚ್ಚಾಗಿಬಿಟ್ಟಿದ್ದಾರೆ.

ಒಂದೊತ್ತಿನ ಊಟ ಹಾಕೋದು ಇರಲಿ, ಹೆತ್ತವರು ಅಂತಲೂ ನೋಡದಂತೆ ಅ’ವಮಾ’ನವೀಯವಾಗಿ ನಡೆಸಿಕೊಳ್ಳುತ್ತಾರೆ. ಇದೆ ಕಾರಣದಿಂದಲೇ ಏನೋ ಮಕ್ಕಳಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ಆಸ್ತಿಯನ್ನ ಸಾಕು ನಾಯಿಯ ಹೆಸರಿಗೆ ವಿಲ್ ಮಾಡಿಸಿದ್ದಾನೆ. ಹೌದು, ಈ ಅಚ್ಚರಿಯ ಘಟನೆ ನಡೆದಿರುವುದು ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ.

ತನ್ನ ಬಗ್ಗೆ ಕಿಂಚಿತ್ತೂ ಪ್ರೀತಿ ಇಲ್ಲದ ಮಕ್ಕಳ ನಡುವಳಿಕೆ ಬಗ್ಗೆ ತುಂಬಾನೇ ಬೇಸರಗೊಂಡಿದ್ದ ೫೧ ವರ್ಷದ ನಾರಾಯಣ್ ಎಂಬ ವ್ಯಕ್ತಿ.

ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈತನ ಬಳಿ ನಾಲ್ಕು ಎಕರೆ ಜಮೀನು ಇತ್ತು. ಇದರಲ್ಲಿ ಅರ್ಧ ಆಸ್ತಿಯನ್ನ ತನ್ನ ಸಾಕು ನಾಯಿಗೆ ವಿಲ್ ಮಾಡಿದ್ದು, ಉಳಿದರ್ಧ ಆಸ್ತಿಯನ್ನ ತನ್ನ ಪತ್ನಿಯ ಹೆಸರಿಗೆ ವಿಲ್ ಮಾಡಿದ್ದಾನೆ. ಇನ್ನು ಇದರ ಬಗ್ಗೆ ಮಾತನಾಡಿರುವ ನಾರಾಯಣ್ ತನ್ನ ಮಕ್ಕಳ ಬಗ್ಗೆ ಬೇಸರ ಹೊರಹಾಕಿದ್ದು, ತನಗೆ ಸೇವೆ ಮಾಡಿರುವುದು ತನ್ನ ಹೆಂಡತಿ ಮತ್ತು ನನ್ನ ಸಾಕು ನಾಯಿ ಎಂದು ಹೇಳಿದ್ದಾರೆ. ಹಾಗಾಗಿಯೇ ಪತ್ನಿ ಹಾಗೂ ನಾಯಿಯ ಹೆಸರಿನಲ್ಲಿ ತಲಾ ಎರಡು ಎಕರೆ ಜಮೀನನ್ನ ವಿಲ್ ಮಾಡಿರುವೆ ಎಂದು ಆ ವ್ಯಕ್ತಿ ಹೇಳಿದ್ದಾರೆ.

ವಿಲ್ ಪ್ರಕಾರ ತನ್ನ ಪ್ರೀತಿ ಪಾತ್ರರಾದ ಪತ್ನಿ ಮತ್ತು ನಾಯಿ ನನ್ನ ಮ’ರಣದ ಬಳಿಕ ನನ್ನ ಆಸ್ತಿಗೆ ವಾರಸುದಾರರಾಗಲಿದ್ದಾರೆ. ಇನ್ನು ತನ್ನ ಪ್ರೀತಿಯ ನಾಯಿಗೆ ಬರುವ ಆಸ್ತಿಯ ಪಾಲನ್ನ ನಾಯಿಯನ್ನ ನೋಡಿಕೊಳ್ಳುವವರು ಅದರ ಮ’ರಣದ ಬಳಿಕ ಪಡೆಯಲಿದ್ದಾರೆ ಎಂದು ರೈತ ನಾರಾಯಣ್ ಹೇಳಿದ್ದಾರೆ. ಈ ಘಟನೆಯನ್ನ ಅವಲೋಕಿಸಿದಾಗ ಗೊತ್ತಾಗುವ ಎರಡು ವಿಷಯ ಎಂದರೆ, ಆ ಮಕ್ಕಳು ತಮ್ಮ ತಂದೆ ನಾರಾಯಣ್ ರವರಿಗೆ ಮಾ’ನಸಿಕವಾಗಿ ಎಷ್ಟೆಲ್ಲಾ ವೇ’ದನೆ ಕೊಟ್ಟಿರಬಹುದು ಅಂತ. ಮತ್ತೊಂದು ಸಾಕು ನಾಯಿ ನಾರಾಯಣ್ ರವರಿಗೆ ಎಷ್ಟೊಂದು ನಿಷ್ಠಾವಂತ ಪ್ರಾಣಿಯಾಗಿತ್ತು ಅಂತ.

Leave a Reply

Your email address will not be published.