ನಿತ್ಯವಾಣಿ, ಹಿರಿಯೂರು , (ಮೇ. 30) : ಹಿರಿಯೂರು ವಿಧಾನಸಭಾ ಕ್ಷೇತ್ರದ ಜನತೆ ಯಾವುದೇ ಅಧಿಕಾರ ನೀಡಿಲ್ಲದಿದ್ದರೂ ಸದಾ ಜನ ಸೇವೆ ಮಾಡುತ್ತಾ ತಾಲೂಕಿನ ಜನತೆಯ ಕಷ್ಟ ಸುಃಖಗಳಿಗೆ ಸ್ಪಂದಿಸುತ್ತ ಜನಮನದಲ್ಲಿ ಉಳಿದಿರುವ ಜನನಾಯಕ, ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮಿಕಾಂತ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ 3 ಸಾವಿರಕ್ಕೂ ಹೆಚ್ಚಿನ ಆಹಾರ ಕಿಟ್ ಗಳನ್ನು ಜನ ಸಾಮಾನ್ಯರಿಗೆ, ಸಂಕಷ್ಟದಲ್ಲಿರುವವರಿಗೆ ವಿತರಣೆ ಮಾಡಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಮೂರು ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ಕೊರೊನಾ ಪಾಸಿಟಿವ್ ಸೋಂಕಿನಿಂದ ಗುಣಮುಖರಾಗಿದ್ದು ಅಂತಹ ಬಡ ಕುಟುಂಬಗಳಿಗೆ 3 ಸಾವಿರಕ್ಕಿಂತ ಹೆಚ್ಚಿನ ಆಹಾರ ಕಿಟ್ ಗಳನ್ನು ಮುಖಂಡ ಎನ್.ಆರ್.ಲಕ್ಷ್ಮಿಕಾಂತ್ ಸ್ವಂತ ಖರ್ಚಿನಲ್ಲಿ ವಿತರಣೆ ಮಾಡಿದ್ದಾರೆ.
ಲಕ್ಷ್ಮಿಕಾಂತ್ ಅವರು ಮಾಡುತ್ತಿರುವ ಜನಪರ ಜನ ಸೇವೆ ಕಾರ್ಯಗಳಿಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು, ಆತ್ಮೀಯರು ಬೆನ್ನಿಗೆ ನಿಂತು ಸಹಕಾರ ನೀಡುತ್ತಿದ್ದಾರೆ.
ಈ ಮೂಲಕ ಜನರು ಸಂಕಷ್ಟದಲ್ಲಿರುವಂತ ಎಲ್ಲ ಸಂದರ್ಭದಲ್ಲೂ ಬಿಜೆಪಿ ಪಕ್ಷ ಸದಾ ನೆರವಿಗೆ ಧಾವಿಸುತ್ತದೆ ಎನ್ನುವ ಅಚಲ ವಿಶ್ವಾಸವನ್ನು ಲಕ್ಷ್ಮಿಕಾಂತ್ ಹೊಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಜಿ.ಪ್ರೇಮ್ ಕುಮಾರ್ ಮಾತನಾಡಿ, ಲಕ್ಷ್ಮಿಕಾಂತ್ ಅವರು ಸುಮಾರು 4 ಲಕ್ಷಕ್ಕೂ ಹೆಚ್ಚಿನ ಹಣವನ್ನು ಒಂದೇ ದಿನ ಖರ್ಚು ಮಾಡಿ ಸಂಕಷ್ಟದಲ್ಲಿರವರಿಗೆ ಆಹಾರ ಧಾನ್ಯ ವಿತರಣೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್ ವಿತರಿಸಿದ್ದಾರೆ. ಇದಲ್ಲದೆ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಆಹಾರ ಕಿಟ್, ಭೀಮನ ಬಂಡೆಯ ಅನಾಥಾಶ್ರಮಕ್ಕೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಜನಮನದಲ್ಲಿ ಲಕ್ಷ್ಮಿಕಾಂತ್ ಉಳಿದ್ದಾರೆ ಎಂದು ಅವರು ತಿಳಿಸಿದರು.
ಆದರೆ ಕೆಲವು ಪ್ರತಿಷ್ಠಿತ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರಿಗೆ ಅಗತ್ಯವಿಲ್ಲದಿದ್ದರೂ ಅಕ್ಕಿ, ಬೇಳೆ, ಸೀರೆ, ಪಂಚೆಗಳನ್ನು ವಿತರಿಸುತ್ತಾರೆ. ಇನ್ನೂ ಕೆಲವು ರಾಜಕಾರಣಿಗಳು ಸಾರ್ವಜನಿಕವಾಗಿ ದೇಣಿಗೆ ಸಂಗ್ರಹ ಮಾಡಿ ವಿವಿಧ ವೈದ್ಯಕೀಯ ಪರಿಕರಗಳನ್ನು ನಾವೇ ಸ್ವಂತ ವಿತರಣೆ ಮಾಡಿದ್ದೇವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ಇರುವ ಲಕ್ಷ್ಮಿಕಾಂತ್ ಅವರು ಸ್ವಂತಕ್ಕೆ ಎಲ್ಲವನ್ನೂ ಮಾಡಿದರೂ ಎಲ್ಲೂ ತನ್ನ ಹೆಸರು ಹೇಳಿಕೊಳ್ಳದೇ ತಮ್ಮ ದೊಡ್ಡತನವನ್ನು ಮೆರೆದಿದ್ದಾರೆಂದು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮಾತನಾಡಿದರು.
ಸಂಸದ ಎ.ನಾರಾಯಣಸ್ವಾಮಿ ಅವರು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ತಾಲೂಕು ಬಿಜೆಪಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು