ಹೆಚ್ ಐ ವಿ ಪೀಡಿತರಿಗೆ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಆಹಾರ ಧಾನ್ಯ ಕಿಟ್ಟುಗಳು ವಿತರಣೆ

ನಿತ್ಯ ವಾಣಿ ,ಚಿತ್ರದುರ್ಗ,(ಜೂ2) :  ಚಿತ್ರದುರ್ಗ ನಗರದ ಶ್ರೀ ಮುರುಘರಾಜೇಂದ್ರ ಬೃಹನಮಠ ಆವರಣದಲ್ಲಿ ಬುಧವಾರ ಡಾ.ಶಿವಮೂರ್ತಿ ಮುರುಘಾ ಶರಣರು ಸಂಕಷ್ಟದಲ್ಲಿರುವ ಹೆಚ್ಐವಿ ಪೀಡಿತರು, ಅಡುಗೆ ಕೆಲಸಗಾರರು, ದೇವಸ್ಥಾನಗಳ ಅರ್ಚಕರು, ವಿವಿಧಡೆ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಸೇರಿದಂತೆ 110 ಜನರಿಗೆ ಆಹಾರ ಧಾನ್ಯ ಕಿಟ್ಟು ಗಳನ್ನು ವಿತರಿಸಿದರು,
ಇಂದಿನ ದವಸ ಧಾನ್ಯ ದಾಸೋಹವನ್ನು ಶ್ರೀಮತಿ ಪಾರ್ವತಮ್ಮ ಮತ್ತು ಜಯಣ್ಣ, ಇಂಜಿನಿಯರ್,  ಬೆಂಗಳೂರು, ಹಾಗೂ ಕಡೂರು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಸಮಿತಿ ಉಪಾಧ್ಯಕ್ ಎಚ್ ಎಂ  ದಯಾನಂದಸ್ವಾಮಿ ಅವರು ವಹಿಸಿಕೊಂಡಿದ್ದರು,  ಈ ಸಂದರ್ಭದಲ್ಲಿ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ ಶಿವಕುಮಾರಸ್ವಾಮಿ, ಪಟೇಲ್ ಶಿವಕುಮಾರ್, ಸಿದ್ದಾಪುರ ನಾಗಣ್ಣ, ಪೈಲ್ವಾನ್ ತಿಪ್ಪೇಸ್ವಾಮಿ, ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published.