ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಅಂಗಸಂಸ್ಥೆ IAHV ಯಿಂದ ಆಕ್ಸಿಜನ್ ಕಾನ್ಸೆನ್ ಟ್ರೇಟರ್ಸಗಳು ಜಿಲ್ಲಾ ಆರೋಗ್ಯ ಕೋವಿಡ್ ಸೆಂಟರ್ ಗೆ ಕೊಡುಗೆ

ನಿತ್ಯವಾಣಿ,ಚಿತ್ರದುರ್ಗ, (ಮೇ. 22) : ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ರವರ ಅಂಗಸಂಸ್ಥೆಯಾದ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಹ್ಯೂಮನ್ ವ್ಯಾಲ್ಯೂ ಸಂಸ್ಥೆಯಿಂದ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ 10 ಆಕ್ಸಿಜನ್ ಕಾನ್ಸೆನ್ ಟ್ರೇಟರ್ಸ್‍ಗಳನ್ನು ಜಿಲ್ಲಾ ಪಂಚಾಯಿತಿಗೆ ಕೊಡುಗೆಯಾಗಿ ನೀಡಿದ್ದರು,

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಕೆ.ನಂದಿನಿದೇವಿ ಜಿಲ್ಲಾಧಿಕಾರಿಗಳಾದ ಕವಿತಾ ಮನ್ನಿಕೇರಿ ರವರಿಗೆ ಇವುಗಳನ್ನು ಜಿಲ್ಲಾ ಆರೋಗ್ಯ ಕೋವಿಡ್ ಸೆಂಟರ್‍ಗಳಿಗೆ ನೀಡಲು ಹಸ್ತಾಂತರಿಸಿದರು.

ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡುತ್ತಾ ಜಿಲ್ಲಾ ಕೋವಿಡ್ ಸೆಂಟರ್ ಗಳಿಗೆ ತುಂಬಾ ಅವಶ್ಯಕತೆ ಇದ್ದು ಈಗ 10 ಆಕ್ಸಿಜನ್ ಕಾನ್ಸೆನ್ ಟ್ರೇಟರ್ಸಗಳು ಈ ಸಂಸ್ಥೆ ಕೊಟ್ಟಿದ್ದಾರೆ, ಇನ್ನು ಅವಶ್ಯಕತೆ ಬಂದಾಗ ನಮಗೆ ಕೊಡಲು ಸಂಸ್ಥೆಯ ಮುಖ್ಯಸ್ಥರಿಗೆ ಕೇಳಿಕೊಂಡರು ಹಾಗೂ ಇದರ ಒಂದರ ಬೆಲೆ 1 ಲಕ್ಷದವರೆಗೆ ಇದ್ದು ಇವುಗಳನ್ನು ಕೊಟ್ಟಿರುವುದಕ್ಕೆ ಸಂಸ್ಥೆಯವರಿಗೆ ಧನ್ಯವಾದಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಾದ ಜಿ.ರಾಧಿಕಾ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪಾಲಾಕ್ಷ,  ಜಿಲ್ಲಾ ಪಂಚಾಯಿತಿ ಅಂತರ್ಜಲ ಚೇತನ ಯೋಜನೆಯ ಜಿಲ್ಲಾ ಸಂಯೋಜಕರಾದ ವಿನಾಯಕ.ಸಿ, ತಾಲೂಕು ಸಂಯೋಜಕರಾದ ಅಂಜಿನಪ್ಪ.ಕೆ, ಜಿಲ್ಲಾ ನರೇಗಾ ಐಇಸಿ ರವೀಂದ್ರನಾಥ್.ಎಂ.ಸಿ, ತಾಲೂಕು ಆರೋಗ್ಯ ಕೇಂದ್ರ ಐಇಸಿ ಮಂಜುನಾಥ್, ನಗರಸಭೆ ಮಾಜಿ ಸದಸ್ಯ ಈ ಮಂಜುನಾಥ್ ಹಾಜರಿದ್ದರು

Leave a Reply

Your email address will not be published.