ನಿತ್ಯವಾಣಿ,ಚಿತ್ರದುರ್ಗ, ಅ.19 : ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಮುಸ್ಲಿಂ ಬಾಂಧವರು ಯಾವುದೇ ಹಬ್ಬಗಳನ್ನು ಸಂಭ್ರಮದಿಂದ ಆಚರಣೆ ಮಾಡಿರಲಿಲ್ಲ ಮಂಗಳವಾರ ಆಚರಿಲಾದ ಈದ್ ಮಿಲಾದ್ ಆಚರಣೆಯ ಸಂಧರ್ಭದಲ್ಲಿ ಎಲ್ಲರ ಮುಖದಲ್ಲಿ ಏನೋ ಒಂದು ನಿರಾಳತೆ ಕಂಡು ಬಂದಿತು ಮನಸ್ಸಲ್ಲಿ ಸಂಭ್ರಮ ಸಡಗರ ಮನೆಮಾಡಿತ್ತು. ಮುಸ್ಲಿಂ ಬಾಂಧವರು ಹೆಚ್ಚಾಗಿರುವ ಹೊರಪೇಟೆ, ನೆಹರು ನಗರ,ಪ್ರಸನ್ನ ರಸ್ತೆ ಸೇರಿದಂತೆ ನಗರದ ಮುಖ್ಯ ವೃತ್ತವಾದ ಗಾಂಧಿ ಸರ್ಕಲ್ಲಿಗೆ ಹಸಿರು ಮತ್ತು ಬಿಳಿಯ ಬಟ್ಟೆಗಳಿಂದ ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಕೋವಿಡ್-19 ವೈರಾಣು ಸೋಂಕು ಹರಡುವುದನ್ನು ತಡೆಗಟ್ಟು ನಿಟ್ಟಿನಲ್ಲಿ ಈದ್ ಮಿಲಾದ್ ಹಬ್ಬವನ್ನು ಮದ್ಯಾಹ್ನ 3 ಗಂಟೆಯ ನಂತರ ನಗರದ ವಿವಿಧ ಭಾಗಗಳಿಂದ ಸಾವಿರಾರು ಯುವಕರು ಕೈಯಲ್ಲಿ ಝಂಡಾ ಹಿಡಿದು ಘೋಷಣೆಗಳನ್ನು ಕೂಗುತ್ತಾ ಗಾಂಧಿ ವೃತ್ತದಲ್ಲಿ ಜಮಾಯಿಸಿದರು. ಈ ಸಡಗರವನ್ನು ಕಣ್ತುಂಬಿಕೊಳ್ಳಲು ಮುಸ್ಲಿಂ ಹೆಂಗಸರು ಮಕ್ಕಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.