ಸಾಮಾಜಿಕ ಪರಿವರ್ತನೆಗೆ ಕನಕದಾಸರ ಕೊಡುಗೆ ಅಪಾರವಾದದ್ದು : ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಸಾಮಾಜಿಕ ಪರಿವರ್ತನೆಗೆ ಕನಕದಾಸರ ಕೊಡುಗೆ ಅಪಾರವಾದದ್ದು ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಭೋವಿ ಗುರುಪೀಠದಲ್ಲಿ ನಡೆದ ಕನಕ ಜಯಂತಿಯಲ್ಲಿ ಮಾತನಾಡಿದ ಅವರುನಾಡಿನ ಸಂಸ್ಕøತಿಯ ಕನ್ನಡಿಯಾಗಿ ಕನಕ ರವರನ್ನು ಕಾಣಬಹುದು, ಕನಕದಾಸರ ಸಾಹಿತ್ಯ, ದೀನ ದಲಿತರ ನಿಮ್ನಾತಿನಿಮ್ನ ವರ್ಗದ ಜನರಿಂದ ಇಡಿದು ಮೇಲ್ವರ್ಗದ ಜನ ಸಮುದಾಯಗಳಲ್ಲಿ, ಮಠಮಾನ್ಯಗಳಲ್ಲಿ, ಗುಡಿಗುಂಡಾರಗಳಲ್ಲಿ ದಾಸ ಸಾಹಿತ್ಯ ಸ್ವೀಕಾರವಾಗಿದೆ. ವಿದ್ವತ್ ಪಂಡಿತರ ಶಾಸ್ತ್ರೀಯ ಸಂಗೀತದಿಂದ ಹಿಡಿದು ಜನಸಾಮಾನ್ಯರ ಜನಪದರ ಭಜನೆಗಳವರೆಗೆ ಕನಕ ಸಾಹಿತ್ಯ ತುಂಬಿಕೊಂಡಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಚರಿತ್ರ್ಯೆಯಲ್ಲಿ ಮೂಡಿಬಂದ ವಚನ ಸಾಹಿತ್ಯ ಸಾಹಿತ್ಯ ಮತ್ತು ದಾಸ ಸಾಹಿತ್ಯ ಜನಸಾಮಾನ್ಯರ ಸಾಹಿತ್ಯವಾಗಿ ಹಾಸುಹೊಕ್ಕಾಗಿದೆ. ಈ ಎರಡು ಸಾಹಿತ್ಯ ಜೀವನವನ್ನು ಆನಂದಮಯವಾಗಿ ಪರಿವರ್ತಿಸುವ ವಿಚಾರಧಾರೆಗಳು ನಾವು ಸಮಾಜದಲ್ಲಿ ಜೀವನೋತ್ಸವದಿಮದ ಸಂತೋಷದಿಂದ ಬಾಳಬೇಕೆಂಬ ದಿಕ್ಸೂಚಿಯನ್ನು ರೂಪಿಸಿದ ಸಾಹಿತ್ಯ. ವಚನ ಮತ್ತು ಕೀರ್ತನೆಗಳ ಸಂದೇಶ ನೇರ, ನಿಷ್ಠೂರ, ಸ್ಪಷ್ಟ, ವಿಡಂಬನೆಯಿಂದ ಸಮಾಜವನ್ನು ಜಾಗೃತಗೊಳಿಸಿದ್ದಾರೆ ಎಂದು ತಿಳಿಸಿದರು.
ಜ್ಞಾನ ಮತ್ತು ಭಕ್ತಿ ಸಾಹಿತ್ಯದ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದರೆ ಅವರವರ ಧರ್ಮದ ಅಸ್ತಿತ್ವವನ್ನು, ಅವರವರ ನಂಬಿಕೆಗಳನ್ನು, ಶ್ರದ್ಧೆಯನ್ನು ಉಳಿಸಿ ಜನರ ಮನಸ್ಸನ್ನು ಧರ್ಮದಲ್ಲಿ ನಡೆಯುವಂತೆ ಮಾಡಿ, ಅರ್ಥವಿಲ್ಲದ ಆಚಾರ-ವಿಚಾರಗಳನ್ನು, ಅಂಧಕರುಣೆಯನ್ನು ಖಂಡಿಸುತ್ತಾ, ಮುಕ್ತಿ ಸಾಧನೆಯಾಗಿ, ಆಧ್ಯಾತ್ಮಪಥವನ್ನು ಒದಗಿಸಿ ಕೊಡುವಲ್ಲಿ ಕೊಡುಗೆ ಅಪಾರ ಹಾಗೂ ಆತ್ಮಭಾವವರಿತ ದಾಸವರೇಣ್ಯರಾಗಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಭೋವಿ ಅಭಿವೃದ್ಧಿ ನಿಗಮದ ಅಜ್ಜಯ್ಯ ಚಿಲೂರು, ರವಿಕುಮಾರ್ ಹಾಗೂ ಸಮಾಜಕಲ್ಯಾಣ ಇಲಾಖೆ ರೇಣುಕಮ್ಮ ಉಪಸ್ಥಿತರಿದ್ದರು.

Leave a Reply

Your email address will not be published.