ಸೋಷಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡಿದ್ದಂತ ಗ್ರಾಮ ಪಂಚಾಯ್ತಿ ಚುನಾವಣೆಯ ಪೋಸ್ಟರ್ ಅಂದ್ರೆ ಅದು ಚಪ್ಪಲಿ ಗುರುತಿನ ಗಂಗಮ್ಮನದ್ದು. ವಿಶಿಷ್ಟ ಪೋಸ್ಟರ್ ಮೂಲಕ ಎಲ್ಲರನ್ನು ಗಮನ ಸೆಳೆದಿದ್ದಂತ ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಕೆರೆ ಹಾಗೂ ದೊಡ್ಡಗುಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದಂತ ಎಚ್.ಗಂಗಮ್ಮ, ಇಂದು ನಡೆದಂತ ಮತಏಣಿಕೆಯಲ್ಲಿ ಸೋಲು ಕಂಡಿದ್ದಾರೆ.
ಹೆಬ್ಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಕೆರೆ ಹಾಗೂ ದೊಡ್ಡಗುಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದಂತ ಎಚ್.ಗಂಗಮ್ಮ ಚಪ್ಪಲಿ ಗುರುತಿನ ಮೂಲಕ, ಗೆದ್ದವರು ಮಾಡುವ ಕೆಲಸ, ಸೋತರೆ ಮಾಡುವ ಕೆಲಸಗಳು ಎಂಬುದಾಗಿ ಪೋಸ್ಟರ್ ಮೂಲಕ ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದಿದ್ದಳು. ಅಲ್ಲದೇ ಸಚಿವ ಸುರೇಶ್ ಕುಮಾರ್ ಅವರೇ ಇದೊಂದು ವಿನೂತನ ಚುನಾವಣಾ ಪ್ರಚಾರ ಪತ್ರ ಎಂಬುದಾಗಿ ಶೇರ್ ಮಾಡಿದ್ದರಿಂದ ಮತ್ತಷ್ಟು ಸೋಷಿಯಲ್ ಮೀಡಿಯಾದಲ್ಲಿ ಹೆಚ್.ಗಂಗಮ್ಮ ಪೋಸ್ಟರ್ ವೈರಲ್ ಕೂಡ ಆಗಿತ್ತು.
ಇಂತಹ ಹೆಬ್ಬೂರು ಗ್ರಾಮ ಪಂಚಾಯ್ತಿಯ ಕಲ್ಕೆರೆ ಗ್ರಾಮದಿಂದ ಸ್ಪರ್ಧಿಸಿದ್ದಂತ ಹೆಚ್ ಗಂಗಮ್ಮ ಇಂದು ನಡೆದಂತ ಚುನಾವಣಾ ಮತಏಣಿಕೆಯಲ್ಲಿ ಸೋಲನ್ನಪ್ಪಿದ್ದಾರೆ. ಹಾಗಾದ್ರೇ.. ಸೋತರೆ ಮಾಡುವ ಕೆಲಸಗಳೆಂದು ಪಟ್ಟಿ ಮಾಡಿದ್ದಂತ ಅವರು, ಆ ಕೆಲಸ ನಿರ್ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.