ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆ

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2020ರ ಸಂಬಂಧ ಮೊದಲ ಹಂತದಲ್ಲಿ ಜಿಲ್ಲೆಯ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ಈ ಮೂರು ತಾಲ್ಲೂಕುಗಳ 100 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಸೂಚನೆ ಹೊರಡಿಸಿದ್ದಾರೆ.
ಡಿ.11 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ಡಿ.12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿ.14 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ಡಿ.22ರಂದು ಅವಶ್ಯವಿದ್ದರೆ ಮತದಾನ ನಡೆಯಲಿದೆ. ಡಿ.24ರಂದು ಮರು ಮತದಾನ ಅವಶ್ಯವಿದ್ದರೆ ನಡೆಸಲಾಗುವುದು. ಮತದಾನ ಬೆಳಿಗ್ಗೆ 7 ರಿಂದ ಸಂಜೆ 5.00 ಗಂಟೆಯವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯವು ಡಿ.30ರಂದು ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಪ್ರಾರಂಭವಾಗಲಿದೆ. ಡಿ.31 ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.
1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಕೋಗುಂಡೆ, ಕಾಲ್ಗೆರೆ, ಯಳಗೋಡು, ಚಿಕ್ಕಗೊಂಡನಹಳ್ಳಿ, ತುರುವನೂರು, ಕೂನಬೇವು, ಮುದ್ದಾಪುರ, ಮಾಡನಾಯಕನಹಳ್ಳಿ, ಇಸ್ಸಾಮುದ್ರ, ಭರಮಸಾಗರ, ಕೊಳಹಾಳು, ಅಳಗವಾಡಿ, ಸಿರಿಗೆರೆ, ಚಿಕ್ಕಬೆನ್ನೂರು, ಐನಹಳ್ಳಿ, ಗುಡ್ಡದರಂಗವ್ವನಹಳ್ಳಿ, ಗೋನೂರು, ಬೆಳಗಟ್ಟ, ದ್ಯಾಮವ್ವನಹಳ್ಳಿ, ಮದಕರಿಪುರ, ಮೇದೆಹಳ್ಳಿ, ಮಠದ ಕುರುಬರಹಟ್ಟಿ, ಚೋಳಗಟ್ಟ, ಲಕ್ಷ್ಮೀಸಾಗರ, ಆಲಗಟ್ಟ, ಬೊಮ್ಮೆನಹಳ್ಳಿ, ಹಿರೇಗುಂಟನೂರು, ಸಿದ್ದಾಪುರ, ದೊಡ್ಡಸಿದ್ದವ್ವನಹಳ್ಳಿ, ಜಣಪಣ್ಣ ನಾಯಕನಕೋಟೆ, ಇಂಗಳದಾಲ್, ಹುಲ್ಲೂರು, ಭೀಮಸಮುದ್ರ, ಸೊಂಡಕೊಳ, ಜಾನುಕೊಂಡ, ಅನ್ನೇಹಾಳು, ಗೊಡಬನಹಾಳು, ಮತ್ತು ಬ್ಯಾಲಹಾಳು ಸೇರಿದಂತೆ ಒಟ್ಟು 38 ಗ್ರಾಮ ಪಂಚಾಯಿತಿಗಳ ಪದಾವಧಿಯು ಮುಕ್ತಾಯವಾದ ಸದಸ್ಯರು ಹೊರ ಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗುವುದು.
1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ದೊಡ್ಡದ ಕಿಟ್ಟದಹಳ್ಳಿ, ಲಕ್ಕಿಹಳ್ಳಿ, ಜಾನಕಲ್, ದೊಡ್ಡಘಟ್ಟ, ಹೆಬ್ಬಳ್ಳಿ, ಮಾಡದಕರೆ, ದೇವಿಗೆರೆ, ಮಲ್ಲಪ್ಪನಹಳ್ಳಿ, ದೇವಪುರ, ಅತ್ತಿಮಗೆ, ಮಧುರೆ, ಆನಿವಾಳ, ಬಾಗೂರು, ಹುಣವಿನಡು, ಸಾಣೆಹಳ್ಳಿ, ಬೋಕಿಕೆರೆ, ಮತ್ತೋಡು, ಗುಡ್ಡದನೇರಲಕೆರೆ, ಕೆಲ್ಲೋಡು, ಕಂಗುವಳ್ಳಿ, ಕಾರೇಹಳ್ಳಿ, ಕಂಚೀಪುರ, ಚಿಕ್ಕಬ್ಯಾಲದಕರೆ, ದೊಡ್ಡತೇಕಲವಟ್ಟಿ, ಬಲ್ಲಾಳಸಮುದ್ರ, ಕಬ್ಬಳ, ಕೈನಡು, ಎಸ್.ನೇರಲಕೆರೆ, ಬೆಲಗೂರು, ಶ್ರೀರಾಂಪುರ, ಹೆಗ್ಗೆರೆ, ತಂಡಗ ಹಾಗೂ ಕುರುಬಳ್ಳಿ ಸೇರಿದಂತೆ ಒಟ್ಟು 33 ಗ್ರಾಮ ಪಂಚಾಯಿತಿಗಳ ಪದಾವಧಿಯು ಮುಕ್ತಾಯವಾದ ಸದಸ್ಯರು ಹೊರ ಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗುವುದು.
1993ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಂದನೂರು, ಮುತ್ತಗದೂರು, ಭರಮಣ್ಣನಾಯಕನದುರ್ಗ, ಗುಂಜಿಗನೂರು, ಚಿಕ್ಕಜಾಜೂರು, ಹಿರೇಎಮ್ಮಿಗನೂರು, ಚಿಕ್ಕ ಎಮ್ಮಿಗನೂರು, ಆಡನೂರು, ಟಿ.ನುಲೇನೂರು, ಚಿತ್ರಹಳ್ಳಿ, ದುಮ್ಮಿ, ಶಿವಗಂಗ, ಶಿವಪುರ, ಮಲ್ಲಾಡಿಹಳ್ಳಿ, ಅರೇಹಳ್ಳಿ, ಮದ್ದೇರು, ಹೊರಕೇದೇವರಪುರ, ತೇಕಲವಟ್ಟಿ, ಉಪ್ಪರಿಗೇನಹಳ್ಳಿ, ತಾಳ್ಯ, ಗುಂಡೇರಿ, ಆರ್.ನುಲೇನೂರು, ತಾಳಿಕಟ್ಟೆ, ರಾಮಗಿರಿ, ನಾರಾಯಣಗೊಂಡನಹಳ್ಳಿ, ಗಂಗಸಮುದ್ರ, ವಿಶ್ವನಾಥನಹಳ್ಳಿ, ತುಪ್ಪದಹಳ್ಳಿ, ಬಿದರಕೆರೆ ಸೇರಿದಂತೆ ಒಟ್ಟು 29 ಗ್ರಾಮ ಪಂಚಾಯಿತಿಗಳ ಪದಾವಧಿಯು ಮುಕ್ತಾಯವಾದ ಸದಸ್ಯರು ಹೊರ ಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಸಾರ್ವತ್ರಿಕ ಚುನಾವಣೆಯನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
================

Leave a Reply

Your email address will not be published.