ಚಿಕ್ಕಮಗಳೂರು : ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ 11 ನೇ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿಗೆ ಕಾರಣವಾಗಿದೆ. ರಸ್ತೆ ಮದ್ಯ ಭಾಗದಲ್ಲೇ ನಿಂತಿರುವ ಕಾಡಾನೆಯನ್ನು ಕಂಡು ಧರ್ಮಸ್ಥಳ ಮತ್ತು ಮಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರು ಭಯ ಬೀತರಾಗಿ ವಾಪಾಸ್ ಹೋಗಿದ್ದಾರೆ.ರಸ್ತೆಯ ಮದ್ಯದಲ್ಲಿ ರಾಜಾರೋಷವಾಗಿ ಕಾಡಾನೆಯ ಓಡಾಟ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಜನ ಸಾಮಾನ್ಯರಿಂದ ಬೇರೆಡೆ ಹೋಗುವ ಪ್ರವಾಸಿಗರಿಗೆ ಕಾಡಾನೆ ಪ್ರತ್ಯಕ್ಷ ಭೀತಿಯನ್ನು ಹುಟ್ಟಿಸಿದೆ.