ಕುಮಾರಸ್ವಾಮಿಗೆ ಬಹಳ ಲೇಟಾಗಿ ಜ್ಞಾನೋದಯವಾಗಿದೆ. ಮುಂಚೆ ಜ್ಞಾನೋದಯವಾಗಿದ್ದರೆ ಅವರು ನಮ್ಮ ಜೊತೆ ಬಂದಿದ್ದರೆ ಮುಖ್ಯ ಮಂತ್ರಿಯಾಗಿ ಮುಂದುವರೆಯಬಹುದಿತ್ತು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.ಚಿತ್ರದುರ್ಗ ನಗರಕ್ಕೆ ಬೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಜೊತೆಗೆ ಹೋಗಿಕೆಟ್ಟೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ,ರಾಜಕಾರಣ ಇದು ಸರ್ಕಲ್ ಇದ್ದಂತೆ ಎಲ್ಲವೂ ತಿರುಗುತ್ತಿರುತ್ತದೆ ಎಂದರು.ಗೋಹತ್ಯೆ ಮತ್ತು ವಲ್ ಜಿಹಾದ್ ನಿಷೇಧಿಸುವ ಬಗ್ಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ತೀರ್ಮಾನ ತೆಗೆದುಕೊಂಡಿದ್ದೆವೆ.ಇದಕ್ಕಾಗಿ ಎಲ್ಲಾ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೆವೆ.ಗೋಹತ್ಯೆ ಲವ್ ಜಿಹಾದ್ ನಿಷೇಧಿಸುತ್ತೇವೆ. ಎಂದ ಅವರು, ಲವ್ ಜಿಹಾದ್‍ನಲ್ಲಿ ಮೋಸ ಮಾಡಿ ವಿದೇಶಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು. ಆದರೆ ಅಂತರ್ಜಾತಿ ವಿವಾಹಕ್ಕೆ ನಮ್ಮ ವಿರೋಧವಿಲ್ಲ ಎಂದು ಅವರು, ಯಾರ ಮಕ್ಕಳೇ ಆಗಲಿ ಮಾರುವುದನ್ನು ಯಾರು ಒಪ್ಪಲು ಸಾಧ್ಯವಿಲ್ಲ. ಪ್ರೀತಿ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವುದನ್ನು ತಡೆಯಬೇಕು. ಅದಕ್ಕಾಗಿ ಕಠಿಣ ಕಾಯ್ದೆ ಜಾರಿಯಾಗಬೇಕು ಎಂದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಲ್ಲ. ಅವರು ಬಳಸಿರುವ ಪದ ನಮ್ಮ ಸಂಸ್ಕøತಿಯಲ್ಲ. ಅಭಿವೃದ್ಧಿ ಬಹಳ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಆದರೂ ಚಾಮುಂಡೇಶ್ವರಿಯಲ್ಲಿ ಸೋತಿದ್ದೇಕೆ ಎಂದು ಪ್ರಶ್ನಿಸಿದರು. ಗೋ ಹತ್ಯೆ ಮಾಡಲು ಅವಕಾಶ ಕೊಡುತ್ತೇವೆ ಎಂದು ಅವರು ಗ್ರಾಪಂ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿ ನೋಡಲಿ ಎಂದು ಸವಾಲು ಹಾಕಿದರು. ಗೋವು ತಾಯಿ ಸಮಾನ ಎನ್ನುತ್ತೇವೆ. ವಯಸ್ಸಾದ ಗೋವನ್ನು ಕಸಾಯಿ ಖಾನೆಗೆ ಕೊಡದೆ ಬಿಜೆಪಿ -ಆರೆಸ್‍ಎಸ್ ನಾಯಕರ ಮನೆ ಮುಂದೆ ಬಿಟ್ಟುಕೊಳ್ಳಲಿ ಎಂದಿದ್ದಾರೆ. ಈ ರೀತಿ ಮಾತನಾಡುವ ಮೂಲಕ ಬಹು ಸಂಖ್ಯಾತರ ಮನಸ್ಸಿಗೆ ಯಾಕೆ ನೋವು ಕೊಡುತ್ತೀರಿ ಎಂದಿದ್ದಾರೆ.ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ಹಾಗೂ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ ಕುರುಬ ಸಮೂದಾಯವನ್ನು ಎಸ್ಟಿಗೆ ಸೇರಿಸುವ ವಿಚಾರ ಸಂಬಂಧಜನವರಿ 15 ರಿಂದ ಕಾಗಿನೆಲೆಯಿಂದ ಪಾದಯಾತ್ರೆ ಆರಂಭಗೊಂಡು ಫೆ. 17 ರಂದು ಬೆಂಗಳೂರು ತಲುಪಲಿದೆ.ಬೆಂಗಳೂರಿನಲ್ಲಿ 10 ಲಕ್ಷ ಜನ ಸೇರಿ ಬೃಹತ್ ಸಮಾವೇಶ ನಡೆಸಲಾಗುತ್ತದೆ ಪಾದಯಾತ್ರೆಯ ನೇತೃತ್ವವನ್ನು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ ಎಂದರು.