ಚಿತ್ರದುರ್ಗ, ನಿತ್ಯವಾಣಿ, ಮಾ20-ಚಿತ್ರದುರ್ಗ ನಗರದ ಪತ್ರಿಕಾಭವನದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಹೊಳಲ್ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ನಾನು ಸಚಿವರಾಗಿದ್ದ ಅವಧಿಯಲ್ಲಿ ಮಾಡಿದ್ದು ಇನ್ನು ಚಾಲನೆಗೆ ಬರುತ್ತಿಲ್ಲ ಅದರಲ್ಲಿ ಮುರಾರ್ಜಿ ಶಾಲೆಗಳು, ಇಂದಿರಾ ಗಾಂಧಿ ಸ್ಟೇಡಿಯಂ, ಶಾಪಿಂಗ್ ಕಾಂಪ್ಲೆಕ್ಸ್, ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬರುವಂತಹ ಎರಡು ಇಲಾಖಾ ಮಳಿಗೆಗಳು, ರಾಮಗಿರಿ ಆಸ್ಪತ್ರೆ, ಅನೇಕ ಕಾರ್ಯಕ್ರಮಗಳು ನೆನೆಗುದಿಗೆ ಬಿದ್ದಿದೆ ಪ್ರಾರಂಭವಾಗಿಲ್ಲ, ನಾಳೆ ಪ್ರಾರಂಭವಾಗುವ ಕೆಎಸ್ಸಾರ್ಟಿಸಿ ಟ್ರೈನಿಂಗ್ ಸೆಂಟರ್ 16 ಕೋಟಿ ನನ್ನ ಅವಧಿಯಲ್ಲಿ ಮಂಜೂರಾತಿ ಮಾಡಿಸಿದ್ದು, ಈಗ ನಾನು ಮಾಡಿದ್ದು ಎಂದು ಹೊಳಲ್ಕೆರೆ ಕ್ಷೇತ್ರಕ್ಕೆ 2000 ಕೋಟಿ ಹಣವನ್ನು ತಂದು ಕಾಮಗಾರಿಗಳನ್ನು ನಡೆಸುತಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಸುಳ್ಳು ನುಡಿಯುತ್ತಿರುವುದು ಸರಿಯಲ್ಲ. ಈತ ಸುಳ್ಳುಗಾರ ಮೋಸಗಾರ ಎಂದು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ನ ವಿರುದ್ಧ ನೇರ ವಾಗ್ದಾಳಿ ನಡೆಸಿದರು, ಈತನ ವಿರುದ್ಧ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಜೊತೆಯಲ್ಲಿ ಎರಡು ಕಿಲೋಮೀಟರ್ ಪಾದಯಾತ್ರೆ ನಡೆಸಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಮುಖಂಡ ಓ. ಶಂಕರ್ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಗಂಗಾಧರಪ್ಪ ಮತ್ತು ಇನ್ನಿತರ ಮುಖಂಡರು ಉಪಸ್ಥಿತರಿದ್ದರು