ನಿತ್ಯವಾಣಿ, ಹೆಚ್ ಡಿ ಕೋಟೆ , ಅ .27 : ಹೆಚ್.ಡಿ ಕೋಟೆ ವಿಶ್ವಕರ್ಮ ಜಯಂತುತ್ಸವದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿ ನಂಜುಂಡಿ ರಘು ಆಚಾರ್ ಗೆ ಬಹಿರಂಗವಾಗಿ ಕಾಂಗ್ರೆಸ್ ಟಿಕೆಟ್ ಕನ್ಪರ್ಮ್ ಮಾಡಿ ಅಂತಾರೆ. ಅದಕ್ಕೆ ನಾನು ಹೇಳೋದು ಇಷ್ಟೇ.. ನನ್ನನ್ನ ಏನ್ ಮಾಡಬೇಕು ಅಂದ್ಕೊಂಡಿದೀಯಾ? ರಘು ಆಚಾರ್ ಗೂ ಹೇಳಿದೀನಿ, ಸ್ವಾಮೀಜಿಗೂ ಹೇಳಿದೀನಿ, ವೈಯುಕ್ತಿಕವಾಗಿ ಸಿಗು ನಿನಗೂ ಹೇಳ್ತೀನಿ ಅನ್ನುವ ಮೂಲಕ ರಘು ಆಚಾರ್ ಗೆ ಟಿಕೆಟ್ ಖಚಿತ ಎಂಬ ಬಗ್ಗೆ ಪರೋಕ್ಷವಾಗಿ ಸಮಾರಂಭದಲ್ಲಿ ಹೇಳಿಕೆ ನೀಡಿದರು..
ಇದೇ ವೇಳೆ ಮಾತನಾಡಿದ ರಘು ಆಚಾರ್ ನಾನಾಗಲಿ, ಕೆಪಿ ನಂಜುಂಡಿ ಆಗಲಿ ವಿಧಾನಸೌಧಕ್ಕೆ ಹೋಗುವುದು ಮುಖ್ಯವಲ್ಲ, ಡಿ.ದೇವರಾಜ ಅರಸು ಅವರ ನಂತರ ಸಣ್ಣ ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಟ್ಟವರು ಸನ್ಮಾನ್ಯ ಸಿದ್ದರಾಮಯ್ಯ ಅವರು. ಅವರಿಂದ ಮುಂದೆಯೂ ಸಣ್ಣ ಪುಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುವಂತಾಗಬೇಕು ಎಂದು ಮನವಿ ಮಾಡಿದರು.