ಚಿತ್ರದುರ್ಗ ::
ಚಿನ್ಮೂಲಾದ್ರಿ ಬೃಹನ್ಮಠದ ಮಹಾ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿರುವ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವ ಸಮಾರಂಭವು ಮಾ. 19 ರಿಂದ 24ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಟ್ರಸ್ಟ್‍ನ ಖಜಾಂಚಿ ಎಸ್.ಸಿ.ಮಲ್ಲಿಕಾರ್ಜನ್ ತಿಳಿಸಿದ್ದಾರೆ.
ಈ ಸಂಬಂಧ ಟ್ರಸ್ಟ್‍ನ ಉಪಾಧ್ಯಕ್ಷರಾದ ಬಿ.ಎಸ್.ವಿಶ್ವನಾಥ್ ಪಟೇಲ್‍ರವರ ಅಧ್ಯಕ್ಷತೆಯಲ್ಲಿ ನಡೆದ ರಥೋತ್ಸವದ ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಾ.19 ರ ಶುಕ್ರವಾರ ಶ್ರೀಸ್ವಾಮಿಗೆ ರುದ್ರಾಭೀಷೇಕ ಕಾರ್ಯವನ್ನು ಕಿಟ್ಟದಾಳ್‍ನ ಪರಮೇಶ್ವರಪ್ಪ ಮತ್ತು ಮಕ್ಕಳು ಅದೇ ದಿನ ಸ್ವಾಮಿಗೆ ಕಂಕಣಧಾರಣೆ, ಪಲ್ಲಕ್ಕಿ ಉತ್ಸವ ಹಾಗೂ ಧ್ವಜಾರೋಹಣ ಸೇವೆಯನ್ನು ನೆಲ್ಲಿಕಟ್ಟೆ ಗ್ರಾಮಸ್ಥರು, ಮಾ.20 ರಂದು ಸ್ವಾಮಿಯ ಆಶ್ವೋತ್ಸವ ಸೇವೆಯನ್ನು ಬೆಟ್ಟದನಾಗೇನಹಳ್ಳಿ ಗ್ರಾಮಸ್ಥರು ್ಳ, ಮಾ.21 ರಂದು ವೃಷಭೋತ್ಸವವನ್ನು ಬಸವಾಪುರ ಗ್ರಾಮಸ್ಥರು ನೇರವೇರಿಸಲು ತೀರ್ಮಾನಿಸಲಾಯಿತು. ಮಾ.22 ರಂದು ಬೆಳಿಗ್ಗೆ 6 ಕ್ಕೆ ಹೋವಿನ ಸೇವೆ, ಗಜೋತ್ಸವ ಸೇವೆ ನಡೆಯಲಿದೆ. ಇದೇ ದಿನ ಬೆಳ್ಳಿಗೆ 10 ಗಂಟೆಗೆ ಸ್ವಾಮಿಯ ಕೆಂಡದಾರ್ಚನೆ ಕಾರ್ಯಕ್ರಮ ನಡೆಯಲಿದೆ.
ಸ್ವಾಮಿಯ ರಥೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಮಾ. 23 ರಂದು ಸಾಮೂಹಿಕ ವಿವಾಹಗಳನ್ನು ನಡೆಸಲು ಉದ್ದೇಶಿಸಲಾಗಿದ್ದು ಇದರಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೊಂದಾಯಿಸಬೇಕಿದೆ, ಈ ವಿವಾಹದಲ್ಲಿ ಭಾಗವಹಿಸುವ ವಧು-ವರರಿಗೆ ಬಟ್ಟೆ ಮತ್ತು ತಾಳಿಯನ್ನು ನೀಡಲಾಗುವುದು. ಸಂಜೆ 4 ಗಂಟೆಗೆ ಸ್ವಾಮಿಯ ಹೂವಿನ ಅಡ್ಡ ಪಲ್ಲಕ್ಕಿಯಲ್ಲಿ ಸ್ವಾಮಿಯ ಮೆರೆವಣಿಗೆಯನ್ನು ನಡೆಸಿ ನಂತರ ಸಂಜೆ 5 ಗಂಟೆಗೆ ಸ್ವಾಮಿಯ ರಥೋತ್ಸವ ಸಮಾರಂಭ ನಡೆಸಲು ನಿರ್ಧಾರ ಮಾಡಲಾಯಿತು.
ಮಾ.24 ರಂದು ಸಂಜೆ 5ಕ್ಕೆ ಸ್ವಾಮಿಯ ಕಂಕಣ ವಿಸರ್ಜನೆ ಹಾಗೂ ಮಹಾಮಂಗಳಾರತಿಯೊಂದಿಗೆ ಈ ಸಾಲಿನ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ಮುಕ್ತಾಯವಾಗಲಿದೆ. ತದ ನಂತರ ಸ್ವಾಮಿಯ ದೇವಸ್ಥಾನವನ್ನು ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲು ಆಡಳಿತ ಮಂಡಳಿ ತೀರ್ಮಾನ ಮಾಡಿದ್ದು ಈ ರಥೋತ್ಸವದ ನಂತರ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭ ಮಾಡಲು ಸಹಾ ತೀರ್ಮಾನಿಸಲಾಯಿತೆಂದು ಎಸ್.ಸಿ.ಮಲ್ಲಿಕಾರ್ಜನಪ್ಪ ತಿಳಿಸಿದ್ದಾರೆ.