ನವದೆಹಲಿ : ಈಗಾಗಲೇ ದೇಶಾದ್ಯಂತ ಫಾಸ್ಟ್ ಟ್ಯಾಗ್ ವಾಹನಗಳಿಗೆ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದಿದ್ದರೇ ದುಪ್ಪಟ್ಟು ಶುಲ್ಕವನ್ನು ವಿಧಿಸಲಾಗುತ್ತಿದೆ. ಕೆಲವೊಮ್ಮೆ ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇದ್ದು, ಟೋಲ್ ನಲ್ಲಿ ಕಾರ್ಡ್ ರೀಡ್ ಮಾಡಲಾಗದೇ ತಾಂತ್ರಿಕ ಸಮಸ್ಯೆಯಿಂದ ಹಣ ಕಡಿತಗೊಳ್ಳದಿದ್ದರೇ, ನೀವು ಯಾವುದೇ ಕಾರಣಕ್ಕೂ ಹಣದ ರೂಪದಲ್ಲಿ ಟೋಲ್ ಗೆ ನೀಡಿ ಟಿಕೆಟ್ ಪಡೆಯುವಂತಿಲ್ಲ. ಟೋಲ್ ನವರು ಹಣವನ್ನು ಪಡೆಯುವಂತಿಲ್ಲ.ಹೌದು. ಈ ಕುರಿತಂತೆ ಮೇ.7, 2018ರಂದೇ ಭಾರತ ಸರ್ಕಾರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಇಂತಹ ಗೆಜೆಟ್ ಅಧಿಸೂಚನೆಯಲ್ಲಿ ವಾಹನವೊಂದು ಫಾಸ್ಟ್ ಟ್ಯಾಗ್ ಹೊಂದಿದ್ದು, ಟೋಲ್ ಫ್ಲಾಜಾ ಹಾದು ಹೋಗುವಂತ ಸಂದರ್ಭದಲ್ಲಿ ಬ್ಯಾಲೆನ್ಸ್ ಇದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಕಡಿತಗೊಳ್ಳಲು ಸಾಧ್ಯವಾಗದಿದ್ದರೇ, ಫಾಸ್ಟ್ ಟ್ಯಾಗ್ ಹೊರತಾಗಿಯೂ ಯಾವುದೇ ಮಾದರಿಯಲ್ಲಿ ಹಣವನ್ನು ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದೆ.ಇನ್ನೂ ಮುಂದುವರೆದು ಫಾಸ್ಟ್ ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇದ್ದು, ಟೋಲ್ ಫ್ಲಾಜಾದ ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಕಡಿತಗೊಳ್ಳದ ಸಂದರ್ಭದಲ್ಲಿ ಜೀರೋ ಸಂದಾಯದ ರಸೀದಿಯನ್ನು ನೀಡಿ ಅಂತಹ ವಾಹನವನ್ನು ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡುವಂತೆಯೂ ಸೂಚಿಸಿದೆ.
ಗೆಜೆಟ್ ಅಧಿಸೂಚನೆಯಲ್ಲಿ ಏನಿದೆ.?
‘ಒಂದು ವೇಳೆ, ಮಾನ್ಯವಾದ, ಕ್ರಿಯಾತ್ಮಕವಾದ FASTag ಅಥವಾ ಅಂತಹ ಯಾವುದೇ ಸಾಧನವನ್ನು ಹೊಂದಿರುವ ಯಾವುದೇ ಸಾಧನವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಮೂಲಸೌಕರ್ಯದೊಂದಿಗೆ ಸ್ಥಾಪಿತವಾದ ಶುಲ್ಕ ಪ್ಲಾಜಾವನ್ನು ದಾಟಿ, ಸಾಕಷ್ಟು ಬ್ಯಾಲೆನ್ಸ್ ಹೊಂದಿರುವ ಯಾವುದೇ ಸಾಧನವನ್ನು ಹೊಂದಿದ್ದರೆ, ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಮೂಲಸೌಕರ್ಯದ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಬಳಕೆದಾರರ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದಲ್ಲಿ, ವಾಹನ ಬಳಕೆದಾರನು ಯಾವುದೇ ಬಳಕೆದಾರ ಶುಲ್ಕಪಾವತಿಸದೆ ಶುಲ್ಕ ಪ್ಲಾಜಾವನ್ನು ಪಾಸ್ ಮಾಡಲು ಅನುಮತಿಸಲಾಗುತ್ತದೆ. ಅಂತಹ ಎಲ್ಲ ವಹಿವಾಟುಗಳಿಗೆ ಶೂನ್ಯ ವಹಿವಾಟು ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು’ ಎಂದು ಹೇಳಿದರು.