ತಂದೆಯಾಗುತ್ತಿರುವ ಉದ್ಯೋಗಿಗಳಿಗೆ `ಅಪ್ಪಂದಿರ ದಿನ’ದಂದು ಆಹ್ಲಾದಕರ ಅಚ್ಚರಿಯ ಕೊಡುಗೆ ನೀಡಿದ ಸೈಕಲ್ ಪ್ಯೂರ್ ಅಗರಬತ್ತಿ

21 ದಿನಗಳ ಪಿತೃತ್ವ ರಜೆ ನೀತಿಯನ್ನು ಜೂನ್ 20, 2021ರಿಂದ ಜಾರಿಗೆ ತಂದ ಕಂಪನಿ

 

ನಿತ್ಯವಾಣಿ,ಬೆಂಗಳೂರು, (ಜೂನ್ 19, 2021) : ಜಗತ್ತಿನ ಅಗರಬತ್ತಿ ತಯಾರಿಕಾ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಉತ್ಪಾದಕರಾದ ಮತ್ತು ಸೈಕಲ್ ಪ್ಯೂರ್
ಅಗರಬತ್ತಿ ತಯಾರಕರಾದ ಎನ್. ರಂಗರಾವ್ ಅಂಡ್ ಸನ್ಸ್(ಎನ್‍ಆರ್‍ಆರ್‍ಎಸ್) ಸಂಸ್ಥೆಯು ಅಪ್ಪಂದಿರ ದಿನದ ಸಂದರ್ಭದಲ್ಲಿ ಪಿತೃತ್ವ ರಜೆ

ನೀತಿಯನ್ನು ಪ್ರಕಟಿಸಿದೆ. ಇದರ ಅನುಗುಣವಾಗಿ ಸಂಸ್ಥೆಯು ತನ್ನ ಉದ್ಯೋಗಿಗಳ ಪೈಕಿ ತಂದೆಯಾಗಲಿರುವವರಿಗೆ 21 ದಿನಗಳ ವೇತನಸಹಿತ ರಜೆಯನ್ನು
ನೀಡಲಿದೆ.

ಈ ಉಪಕ್ರಮವು ನೂತನ ಅಪ್ಪಂದಿರು ತಮ್ಮ ನವಜಾತ ಶಿಶುವಿನೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶವನ್ನು
ಪೂರೈಸಲಿದೆ. ಜೊತೆಗೆ ಅವರು ಈ ಸಮಯದಲ್ಲಿ ತಮ್ಮ ಪತ್ನಿಯರಿಗೆ ಬೆಂಬಲ ನೀಡಬಹುದಾಗಿರುತ್ತದೆ. ಈ ನೀತಿಯು ಜೂನ್ 20, 2021ರಿಂದ
ಜಾರಿಗೆ ಬರಲಿದೆ. ಇದರೊಂದಿಗೆ ಶಿಶುವಿನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿರಲು ವೇತನಸಹಿತ ಮೂರು ವಾರಗಳ ಸಮಯವನ್ನು ಕಂಪನಿಯು
ಕೆಲಸ ಮಾಡುತ್ತಿರುವ ತಂದೆಯರಿಗೆ ನೀಡಲಿದೆಬಹಳ ಕಾಲದಿಂದ ಪಿತೃತ್ವ ರಜೆ ಎನ್ನುವ ಚಿಂತನೆ ಭಾರತದಲ್ಲಿ ಇರಲಿಲ್ಲ. ಪುರುಷರಿಗೆ ಪಿತೃತ್ವ ರಜೆಯ ನೀತಿಯನ್ನು ಯಾವುದೇ ಸರ್ಕಾರ ಕಡ್ಡಾಯ
ಮಾಡಿಲ್ಲ. ಅವರಿಗೆ ಸಾಮಾನ್ಯವಾಗಿ ಸರ್ಕಾರಿ ಕ್ಷೇತ್ರದಲ್ಲಿ ಒಂದು ಅಥವಾ ಎರಡು ವಾರಗಳ ವೇತನಸಹಿತ ರಜೆಯನ್ನು ಸಾದರಪಡಿಸಲಾಗುತ್ತದೆ. ಖಾಸಗಿ

ಕ್ಷೇತ್ರದಲ್ಲಿ ಇದು ಕಂಪನಿಯಿಂದ ಕಂಪನಿಗೆ ವ್ಯತ್ಯಾಸವಾಗುತ್ತದೆ. ಬಹುತೇಕ ಸಂಸ್ಥೆಗಳು ಅಪ್ಪಂದಿರಿಗೆ ವೇತನಸಹಿತ ರಜೆಯನ್ನು ನೀಡುವುದಿಲ್ಲ.

ಪತ್ನಿಯರಿಗೆ ಮತ್ತು ಅವರ ಶಿಶುಗಳಿಗೆ ಅತ್ಯಂತ ಅಗತ್ಯವಾಗಿರುವ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ವೇತನಸಹಿತ ರಜೆಯನ್ನು ಅಪ್ಪಂದಿರುವ
ಪಡೆಯುವ ಖಾತ್ರಿ ಮಾಡಿಕೊಳ್ಳುವಂತಹ ಈ ಪಿತೃತ್ವ ರಜೆ ನೀತಿ ಎಂಬುದು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಕೈಗೊಂಡಿರುವ ಸ್ವಾಗತಾರ್ಹ
ನಡೆಯಾಗಿದೆ. ಸಾಂಕ್ರಾಮಿಕವು ನಮಗೆ ಕಲಿಸಿಕೊಟ್ಟಿರುವ ಒಂದು ಅಂಶ ಎಂದರೆ ಪರಸ್ಪರ ನಾವು ಬೆಂಬಲ ನೀಡಿದರೆ ಒಂದಾಗಿ ಮತ್ತಷ್ಟು ನಾವು
ಗಟ್ಟಿಯಾಗಿರುತ್ತೀರಿ ಎಂಬುವುದಾಗಿದೆ. ಕುಟುಂಬದ ಸೌಖ್ಯತೆಯ ಕಡೆಗೆ ಸಮಯದ ಕೊಡುಗೆಯನ್ನು ಎಲ್ಲರೂ ನೀಡಬೇಕಾದ ಕುಟುಂಬಗಳ
ಪ್ರಕರಣದಲ್ಲಿ ಇದು ಹೆಚ್ಚು ಮುಖ್ಯವಾಗಿರುತ್ತದೆ.

ಈ ಪ್ರೋತ್ಸಹಕರ ಉದ್ಯೋಗಿಗಳಿಗೆ ಲಾಭದಾಯಕವಾದ ಕ್ರಮವನ್ನು ಪ್ರಕಟಿಸಿದ, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕರಾಧ ಅರ್ಜುನ್ ರಂಗ ಅವರು ಮಾತನಾಡಿ, “ಅಪ್ಪಂದಿರ ದಿನ ಹತ್ತಿರವಾಗುತ್ತಿರುವುದರೊಂದಿಗೆ ಈ ಪ್ರಕಟಣೆಯ ಮೂಲಕ ನಮ್ಮ
ಉದ್ಯೋಗಿಗಳಿಗೆ ಅಚ್ಚರಿ ನೀಡಲು ನಾವು ನಿರ್ಧರಿಸಿದ್ದೆವು. ವೃತ್ತಿಪರ ನಿರ್ವಹಣೆಯ ಜೊತೆಗೆ ಕುಟುಂಬ ವ್ಯವಹಾರ ಮೌಲ್ಯಗಳನ್ನು ಹೊಂದಿರುವುದು
ನಮ್ಮ ಮೂಲ ನಂಬಿಕೆಗಳಲ್ಲಿ ಒಂದಾಗಿದ್ದು, ಈ ಉಪಕ್ರಮ ಅದಕ್ಕೆ ತಕ್ಕಂತಿದೆ. ನಮ್ಮ ಉದ್ಯೋಗಿಗಳ ಕುಟುಂಬಗಳ ಸೌಖ್ಯತೆಯ ಖಾತ್ರಿಯನ್ನು ಈ
ತಂದೆಯರಿಗೆ ನೀಡಲಾಗುವ ಪಿತೃತ್ವದ ರಜೆ ಮಾಡಿಕೊಳ್ಳಲಿದೆ. ಒಂದು ಶಿಶುವಿನ ಜನ್ಮ ಎನ್ನುವುದು ಕುಟುಂಬಕ್ಕೆ ಅಮೂಲ್ಯವಾದ ಕ್ಷಣವಾಗಿರುತ್ತದೆ.

ಅಲ್ಲದೆ, ನೂತನ ತಾಯಿಂದಿರಿಗೆ ಈ ಸಮಯದಲ್ಲಿ ತಂದೆಯಾದವರಿಂದ ಅಗತ್ಯ ಸಮಯ ಮತ್ತು ಬೆಂಬಲ ನೀಡುವ ಅಗತ್ಯವಿರುತ್ತದೆ. 21 ದಿನಗಳ
ವೇತನಸಹಿತ ಪಿತೃತ್ವ ರಜೆಯು ತಾವು ಪೋಷಕರಾಗುವ ಅಮೂಲ್ಯ ಕ್ಷಣಗಳನ್ನು ಆನಂದಿಸಲು ನಮ್ಮ ಉದ್ಯೋಗಿಗಳಿಗೆ ನೆರವಾಗಲಿದೆ” ಎಂದರು.
ತಮ್ಮ ಉದ್ಯೋಗಿಗಳಲ್ಲಿ ಒಬ್ಬರಾದ ಹಿರಿಯ ಉತ್ಪಾದನಾ ಮೇಲ್ವಿಚಾರಕರಾದ ರವಿಚಂದ್ರನ್ ಅವರು ತಮ್ಮ ಪತ್ನಿಗೆ ಶಿಶುವಿನ ಜನನದ ಮುನ್ನ
ಮತ್ತು ನಂತರ ಬೆಂಬಲ ನೀಡಲು ಪಿತೃತ್ವ ರಜೆಯನ್ನು ನೀಡಿದ ನಂತರ ಈ ಸಂಸ್ಥೆಯು ಈ ಈ ಪ್ರಮುಖ ನಿರ್ಧಾರ ಕೈಗೊಂಡಿತ್ತು. ರವಿಚಂದ್ರನ್ ಅವರ
ಪತ್ನಿ ಗರ್ಭಾವಸ್ಥೆ ವಿಶೇಷ ಪ್ರಕರಣವಾಗಿದ್ದು, ಈ ರಜೆಯಿಂದ ರವಿಚಂದ್ರನ್ ಅವರಿಗೆ ಬಹಳ ಲಾಭವಿತ್ತು. ರವಿಚಂದ್ರನ್ ಅವರ ಪತ್ನಿ ಒಂದೇ
ಸಮಯದಲ್ಲಿ ಪ್ಯಾಂಕ್ರಿಯಾಸ್ ಮತ್ತು ಮೂತ್ರಪಿಂಡಗಳ ಕಸಿಗೆ ಒಳಗಾದ ನಂತರ ಸ್ವಾಭಾವಿಕ ಹೆರಿಗೆಯ ಮೂಲಕ ಆರೋಗ್ಯಕರ ಶಿಶುವಿಗೆ ಜನ್ಮ ನೀಡಿದ
ದೇಶದ ಪ್ರಥಮ ಮಹಿಳೆಯಾಗಿರುತ್ತಾರೆ.

ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

 

Leave a Reply

Your email address will not be published.