BREAKING NEWS :: ನಟ ಪುನೀತ್‌ ರಾಜ್‌ಕುಮಾರ್‌ಗೆ ‘ಬಿಗ್‌ ಶಾಕ್’‌

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಕರೋನ ಸೊಂಕಿನ ಪ್ರಮಾಣದ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ನಡುವೆ ಕರೋನ ಸೊಂಕು ಹೆಚ್ಚಳವಾಗುವುದಕ್ಕೆ ಪ್ರಮುಖ ಕಾರಣ ಹೆಚ್ಚಿನ ಜನ ಸಂಖ್ಯೆ ಸೇರುವುದರಿಂದಲೇ ಕರೋನ ಸೊಂಕು ಹೆಚ್ಚಾಗುತ್ತಿರುವುದಕ್ಕೆ ಪ್ರಮುಖ ಕಾರಣ ಅಂತ ತಜ್ಞನರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.

ಇವೆಲ್ಲದರ ನಡುವೆ ರಾಜಕೀಯ ಪಕ್ಷ ಹಾಗೂ ಕನ್ನಡದ ಕೆಲಸ ಸಿನಿಮಾ ತಂಡದವರು ಪ್ರಚಲಿತದಲ್ಲಿರುವ ಕೋವಿಡ್‌ ಕಾನೂನು ನಿಯಮವನ್ನು ಮೀರಿ ಜನಜಾತ್ರೆ ನಡೆಸುತ್ತಿದ್ದು, ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕರೋನ ಕೇಸ್‌ ಹೆಚ್ಚಾಗುವುದು ಎನ್ನಲಾಗುತ್ತಿದೆ. ಇವೆಲ್ಲದರ ನಡುವೆ ಸ್ಯಾಂಡಲ್‌ವುಡ್‌ ನಟ ಪುನೀತ್‌ ರಾಜ್‌ ಕುಮಾರ್‌ ಅವರು ತಮ್ಮ ಹೊಸ ಸಿನಿಮಾ ಯುವರತ್ನದ ಪ್ರಮೋಶನ್‌ಗಾಗಿ ರಾಜ್ಯದ ನಾನಾ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಹೀಗೆ ಪ್ರವಾಸ ಮಾಡುತ್ತಿರುವ ವೇಳೆಯಲ್ಲಿ, ಸಾವಿರಾರು ಜನರು ಸೇರಿಕೊಳ್ಳುತ್ತಿರುವುದು ಈಗ ಬಗೆಹರಿಯದ ಸಮಸ್ಯೆಯಾಗ ತೊಡಗಿದೆ.

ಇವೆಲ್ಲದರ ನಡುವೆ ವಕೀಲ ಜಿ.ಆರ್.ಮೋಹನ್ ಎನ್ನುವವರು ರಾಯಚೂರು ಸಮಾವೇಶದಲ್ಲಿ ಬಿಜೆಪಿಯಿಂದ ಹಾಗೂ ‘ಯುವರತ್ನ’ ಚಿತ್ರತಂಡದಿಂದ ಕೊವಿಡ್​ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಜ್ಞಾಪನಾ ಪತ್ರ ಸಲ್ಲಿಕೆ ಮಾಡಿ ಮಾಡಿದ್ದಾರೆ. ‘ಯುವರತ್ನ’ ಚಿತ್ರತಂಡದಿಂದ ಹಾಗೂ ರಾಯಚೂರು ಸಮಾವೇಶದಲ್ಲಿ ಬಿಜೆಪಿಯವರಿಂದ ಕೋವಿಡ್‌ ನಿಯಮಗಳನ್ನು ಉಲ್ಲಂಘಟನೆ ಮಾಡುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರು ಕೂಡ ರಾಜ್ಯ ಸರ್ಕಾರ ಇನ್ನೂ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಪುನೀತ್‌ ರಾಜ್‌ ಕುಮಾರ್‌ ಹಾಗೂ ಅವರ ಚಿತ್ರತಂಡದವರನ್ನು ಕೂಡ ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದು, ನಿಮ್ಮ ಉದ್ದೇಶ ಸಿನಿಮಾದಿಂದ ಹಣ ಮಾಡುವುದೇ ಹೊರತು, ಜನರನ್ನು ಕಾಪಾಡುವುದು ಅಲ್ಲ ಅಂತ ಹೇಳುತ್ತಿದ್ದಾರೆ. ಈ ನಡುವೆ ವಕೀಲರು ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ಸರ್ಕಾರ ಕೈಗೊಂಡ ಕ್ರಮದ ಕ್ರಮಗಳನ್ನು ಏಪ್ರಿಲ್ 8ರೊಳಗೆ ನೀಡಲು ಹೈಕೋರ್ಟ್‌ ಮಾಹಿತಿ ನೀಡಬೇಕಾಗಿದೆ. ಒಟ್ಟಿನಲ್ಲಿ ಕರೋನ ಸಾಂಕ್ರಾಮಿಕ ರೋಗ ಅನ್ನುವುದು ಕೂಡ ಮರೆತು ಸಿನಿಮಾ ಮಂದಿ, ರಾಜಕೀಯ ಜನರು ತಮ್ಮ ಸ್ವಾರ್ಥಕ್ಕಾಗಿ ಹೀಗೆ ನಡೆದುಕೊಳ್ಳುವುದು ಸರಿನಾ ಎಂದು ಪ್ರಶ್ನಿಸಿದ್ದಾರೆ

Leave a Reply

Your email address will not be published.