ಚಿತ್ರ ನಿರ್ದೇಶಕ ಎಂಜಿ ರಹೀಂಗೆ ಸಂತಾಪ

ಮಂಗಳೂರು, ಎ.9: ಚಲನಚಿತ್ರ ನಿರ್ದೇಶಕ ಎಂ.ಜಿ. ರಹೀಮ್ ಅವರಿಗೆ ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಸಂತಾಪ ಸೂಚಕ ಸಭೆಯ ಗುರುವಾರ ನಗರದ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ನಡೆಯಿತು.

ಕವಿ ಮುಹಮ್ಮದ್ ಬಡ್ಡೂರು, ತುಳುನಾಡ ಐಕ್ಯತಾ ವೇದಿಕೆಯ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸ್ಥಾಪಕಾಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ್, ಮಾಜಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಅಬೂಬಕ್ಕರ್ ಪಲ್ಲಮಜಲು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್, ಕವಿ ಹಮೀದ್ ಹಸನ್ ಮಾಡೂರು ಮಾತನಾಡಿದರು.ಈ ಸಂದರ್ಭ ರಿಯಾಝ್ ಹರೇಕಳ, ಗಾಯಕರಾದ ಹಮೀದ್ ಕಣ್ಣೂರು, ಇಸ್ಮಾಯಿಲ್, ಆರಿಫ್ ಕಲ್ಲಟ್ಟ, ರಶೀದ್ ಗಡಿಯಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು.

Leave a Reply

Your email address will not be published.