ಮೊರಾದಾಬಾದ್: ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವ್ರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐಪಿಸಿಯ ಸೆಕ್ಷನ್ 147, 342 ಮತ್ತು 323ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮತ್ತೊಂದೆಡೆ, ಎಸ್ಪಿ ಜಿಲ್ಲಾಧ್ಯಕ್ಷ ಜಯವೀರ್ ಸಿಂಗ್ ಯಾದವ್ ಕೂಡ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್ 160/341/332/353/504/499 / 120 ಬಿ ಅಡಿಯಲ್ಲಿ ಇಬ್ಬರು ಪತ್ರಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಸಲಿಗೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಮೊರಾದಾಬಾದ್ ತಲುಪಿದ್ದು, ಅಲ್ಲಿ ಅವರು ಶಾಸಕ ಮೊಹಮ್ಮದ್ ಫಾಹಿಮ್ ಅವರ ಮನೆಗೆ ಆಗಮಿಸಿದ್ದಾರೆ. ಈ ಸಮಯದಲ್ಲಿ ಮಾಜಿ ಸಚಿವ ಮತ್ತು ಎಸ್‌ಪಿ ಕಾರ್ಯಕರ್ತರ ನಡುವೆ ಸದ್ದು ನಡೆಯುತ್ತಿತ್ತು. ಪತ್ರಿಕಾಗೋಷ್ಠಿಯ ನಂತರ, ಎಸ್ಪಿ ಕಾರ್ಯಕರ್ತರು ಅಖಿಲೇಶ್ ಯಾದವ್ ಅವರ ಮುಂದೆಯೇ ಗಲಭೆಯಾಯ್ತು. ಇದ್ರಲ್ಲಿ ಅನೇಕ ಪತ್ರಕರ್ತರಿಗೆ ಗಾಯಗಳಾಗಿದ್ದು, ಅವ್ರ ಮೊಬೈಲ್ ಮತ್ತು ಕ್ಯಾಮೆರಾಗಳು ಕೂಡ ಮುರಿದು ಹೋಗಿವೆ.
ಪತ್ರಿಕಾಗೋಷ್ಠಿಯ ನಂತರ ಆಗಿದ್ದೇನು..?
ಅಖಿಲೇಶ್ ಯಾದವ್ ಅವರು ಮೊರಾದಾಬಾದ್ʼನ ಹೋಟೆಲ್‌ವೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇಲ್ಲಿ ಪತ್ರಕರ್ತನೊಬ್ಬರ ಪ್ರಶ್ನೋತ್ತರದಲ್ಲಿ ಅಖಿಲೇಶ್ ಯಾದವ್, ‘ನೀವು ಎಂದಾದರೂ ಬಿಜೆಪಿಗೆ ಪ್ರಶ್ನೆ ಕೇಳಿದ್ದೀರಾ?’ ಎಂದು ಹೇಳಿದರು. ಇದ್ರ ನಂತ್ರ ಪತ್ರಿಕಾಗೋಷ್ಠಿ ಕೊನೆಗೊಂಡಿತು ಹಾಗೂ ಕಾರ್ಯಕರ್ತರು ನಡುವೆ ಕೋಲಾಹಲ ಪ್ರಾರಂಭವಾಯ್ತು. ಈ ಸಮಯದಲ್ಲಿ, ಸಮಾಜವಾದಿ ಪಕ್ಷದ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿ ಅಖಿಲೇಶ್ ಯಾದವ್ ಎದುರು ಇದ್ದಕ್ಕಿದ್ದಂತೆ ಮಾಧ್ಯಮ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿ ಅವರನ್ನ ಹೋಟೆಲ್ʼನಿಂದ ಹೊರಗೆ ಓಡಿಸಲು ಪ್ರಾರಂಭಿಸಿದರು. ಇನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಪತ್ರಕರ್ತರು ಪಕ್ಷಪಾತ ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ರು. ಮಾಧ್ಯಮ ವ್ಯಕ್ತಿಗಳ ಮೇಲಿನ ಹಲ್ಲೆ ಪತ್ರಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಯ್ತು.