ಚಿತ್ರದುರ್ಗ, ನಿತ್ಯವಾಣಿ ವರದಿ : :ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಮುಖ್ಯ ವೃತ್ತದಲ್ಲಿ ಹೂವು, ಬಳೆ, ಅರಿಶಿನ ಕುಂಕುಮ, ಸೇರಿದಂತೆ ಚಿಕ್ಕ ಪುಟ್ಟ ಸಾಮಾಗ್ರಿ ಮಾರುತ್ತಿದ್ದ ಹತ್ತಾರು ಅಂಗಡಿಗಳಿದ್ದವು. ಇಂದು ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿದ್ದು ಎಲ್ಲವೂ ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಅಲ್ಲಿದ್ದ ಸ್ಥಳೀಯರು 112 ಕ್ಕೆ ಕರೆ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ಇಲಾಖೆ ತನಿಖೆ ನಡೆಸುತಿದ್ದರೆ