ಆಕಸ್ಮಿಕ ಬೆಂಕಿ ಬೆಳೆ ಸಂಪೂರ್ಣ ಬಸ್ಮ

ನಿತ್ಯವಾಣಿ, ಕೂಡ್ಲಿಗಿ,(ಡಿ.20) : ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಸುಮಾರು ೬ ಎಕರೆ ಕಬ್ಬು ಸುಟ್ಟು ಸಂಪೂರ್ಣ ಹಾನಿಯಾದ ಘಟನೆ ತಾಲೂಕಿನ ಹೆಸರೂರ ಗ್ರಾಮದಲ್ಲಿ  ನಡೆದಿದೆ.                             ವಿಡಿಯೋ 

ತಾಲೂಕಿನ ಹೆಸರೂರ ಗ್ರಾಮದ ರೈತ ಬಸಪ್ಪ ಕಲ್ಯಾಣಪ್ಪ ಮರಡೂರ ಇವರಿಗೆ ಸೇರಿದ ೪ ಎಕರೆ ಹಾಗೂ ರಮೇಶ ಯಲಗಚ್ಛ ಅವರಿಗೆ ಸೇರಿದ ೨ ಎಕರೆ ಕ್ರಮವಾಗಿ ೩.೮೦ ಲಕ್ಷ ಹಾಗೂ ೧.೮೦ ಲಕ್ಷ ಸೇರಿ ಒಟ್ಟು ೫.೬೦ ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವ ಮುನ್ನ ಕಬ್ಬು ಸುಟ್ಟು ಕರಕಲಾಗಿರುವದು ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಬ್ಬಿನ ಬೆಳೆಗೆ ಹತ್ತಿದ್ದ ಬೆಂಕಿ ಮುಂದಿನ ಹೊಲಕ್ಕೆ ಹತ್ತದಂತೆ ತಡೆದರು. ಬೆಂಕಿ ಅವಘಡಕ್ಕೆ ನಿಖರ ಮಾಹಿತಿ ತಿಳಿದು ಬಂದಿಲ್ಲಾ. ಈ ಘಟನೆ ಸವಣೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published.