ಬೆಂಕಿ ಹೊತ್ತಿ ಉರಿಯಿತು ಡಾ.ಶ್ರೀಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ ಜೈವಿಕ ವನ

ತುಮಕೂರು: ಹಲವಾರು ಜೀವಗಳನ್ನು ಉಳಿಸಬಹುದಾಗಿದ್ದ ಸಂಜೀವಿನಿಯಂಥ ಗಿಡಮೂಲಿಕೆಗಳನ್ನು ಹೊಂದಿದ್ದ ಜೈವಿಕ ವನವೊಂದು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶಗೊಂಡಿದೆ.

ಅದರಲ್ಲೂ ಲಿಂಗೈಕ್ಯ ಡಾ.ಶ್ರೀಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿದ್ದ, ಸಿದ್ಧಗಂಗಾ ಸಂಸ್ಥೆಗೆ ಸೇರಿರುವ ಈ ಜೈವಿಕ ವನ ಅಗ್ನಿಜ್ವಾಲೆಗೆ ತುತ್ತಾಗಿದೆ. ತುಮಕೂರು ತಾಲೂಕು ಬಸ್ತಿಬೆಟ್ಟದ ಬಳಿ ಇರುವ ಈ ಜೈವಿಕ ವನ ಬೆಂಕಿಗೆ ತುತ್ತಾಗಿರುವುದರ ಕಾರಣವಿನ್ನೂ ನಿಗೂಢವಾಗಿಯೇ ಉಳಿದಿದೆ.

ಹಲವು ರೋಗಗಳ ಮೇಲೆ ಪ್ರಭಾವ ಬೀರಿ, ಗುಣಪಡಿಸಬಹುದಾದ ಗಿಡಮೂಲಿಕೆಗಳನ್ನ ಬೆಳೆಸಲಾಗುತ್ತಿದ್ದ ಈ ಜೈವಿಕ ವನಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದ್ದು, ಕ್ಯಾತ್ಸಂದ್ರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.