ದಿನಾಂಕ: 26.01.2021ರಂದು ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿ 72ನೇ ಗಣ ರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಆರ್ ಎ ಅಶೋಕ್ ರವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳಾದ ಶ್ರೀ ಎ ವಾಸಿಂ, ಉಪಾಧ್ಯಕ್ಷರಾದ ಶ್ರೀ ಕೆ ಸಿ ರಮೇಶ್ ಹಾಗೂ ಇನ್ನಿತರೆ ಸದಸ್ಯರುಗಳು ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸಿ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಿದರು.
ಸದಸ್ಯರುಗಳಾದ ಶ್ರೀಮತಿ ನಾಗರತ್ನ ಹೆಚ್ ಆರ್ ವೇದಮೂರ್ತಿ, ಶ್ರೀ ಪಿ ಆರ್ ಮಲ್ಲಿಕಾರ್ಜುನ್, ಶ್ರೀ ಡಿ ಎಸ್ ವಿಜಯ, ಶ್ರೀ ಬಿ ಎಸ್ ರುದ್ರಪ್ಪ, ಶ್ರೀ ವಿಜಯಸಿಂಹ ಖಾಟ್ರೋತ್ ಎಲ್, ಶ್ರೀ ಪಿ ಹೆಚ್ ಮುರುಗೇಶ್, ಶ್ರೀಮತಿ ಶಬೀನ ಅಶ್ರಫುಲ್ಲಾ, ಶ್ರೀ ಸೈಯದ್ ಸಜೀಲ್, ಪತ್ರಕರ್ತರಾದ ಶ್ರೀ ವೇದಮೂರ್ತಿ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.